SHARE

ಬೆಳಗಾವಿ: ಹಿಂದೂ ಸಮಾಜ ಒಡೆಯುವ ಮೂಲ ರೂವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟು ಹಾಕಿದ್ದಾರೆ ಎಂದು ಹಿಂದೂ ಜನಜಾಗೃತಿ ಆಕ್ರೋಶ ವ್ಯಕ್ತಪಡಿಸಿದೆ. ಇಂದು ಸುದ್ದಿಗೋಷ್ಠಿ ನಡೆಸಿ ಗುರುಪ್ರಸಾದಗೌಡ ಮಾತನಾಡಿ ಶಿವನ ಉಪಾಸಕರಾದ ಲಿಂಗಾಯತರನ್ನು ಹಿಂದೂ ಧರ್ಮ ಸಂಸ್ಕ್ರತಿಯಿಂದ ಒಡೆಯುವ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಮಾಜಿ ಸಿಎಂ ಸಿದ್ದರಾಮಯ್ಯ ಮೂಲ ರೂವಾರಿಯಾಗಿ, ಕೆಲ ದುಷ್ಟ ಹಿತಾಸಕ್ತಿಗಳನ್ನು ಕೂಡಿಸಿಕೊಂಡು ಇಂತಹ ದುಸ್ಸಾಹಸ ಮಾಡಿದ್ದಾರೆ. ಓಟ ಬ್ಯಾಂಕಗಾಗಿ ಹಿಂದೂ ಧರ್ಮವನ್ನು ಒಡೆಯುವ ದುಷ್ಟ ರಾಜಕೀಯ ಮಾಡಲಾಗಿದೆ ಎಂದು ಹಿಂದೂ ಜನಜಾಗೃತಿ ರಾಜ್ಯ ಸಂಚಾಲಕ ಗುರುಪ್ರಸಾದ ಗೌಡ ಅಸಮಧಾನ ವ್ಯಕ್ತಪಡಿಸಿದರು.

ಡಿ. ಕೆ. ಶಿವಕುಮಾರ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಒಡೆಯುವ ಬಗ್ಗೆ ನಡೆದ ಯತ್ನದ ಬಗ್ಗೆ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. ಆದರೆ ಅವರು ಷಡ್ಯಂತ್ರ ಮಾಡುತ್ತಿರುವವರ ಬೆನ್ನು ಮುರಿಯಬೇಕಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕೂಡಲೇ ರಾಜ್ಯದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಮನಿಷಾತಾಯಿ ಮಾತನಾಡಿ 12ನೇ ಶತಮಾನದಲ್ಲಿ ಮೇಲು ಕೀಳು ಮೆಟ್ಟಿ ಹಾಕಿ ಸರ್ವರೂ ಒಂದೇ ಎಂದಿದ್ದರು ಬಸವಣ್ಣನವರು. ಹಿಂದುತ್ವ ಎನ್ನುವುದು ಎಲ್ಲ ಜಾತಿ ಧರ್ಮದ ಮೂಲ ಬೇರು ಎಂದು ಲಿಂಗಾಯತ ಧರ್ಮದ ಪ್ರಮುಖ ಪದಾಧಿಕಾರಿ ಮನಿಷಾತಾಯಿ ಕೋರಿದರು. ರಿಷಿಕೇಶ ಗುಜ್ಜರ ಉಪಸ್ಥಿತರಿದ್ದರು.