SHARE

ಬೆಳಗಾವಿ: ಬಿಮ್ಸ್ ಆಸ್ಪತ್ರೆಯ ಗುತ್ತಿಗೆ ಆಧಾರದ ಸಿಬ್ಬಂಧಿಗೆ ಮಾಸಿಕ ವೇತನ ಹೆಚ್ಚಿಸಿ ಸೇವೆ ಖಾಯಂಗೊಳಿಸಲು ಪ್ರತಿಭಟನೆ ನಡೆಯಿತು. ಬಿಮ್ಸ್ ಆಸ್ಪತ್ರೆಯ ಸಿ ಮತ್ತು ಡಿ ನೌಕರರು ತಾವು ಹಲವಾರ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಗುತ್ತಿಗೆ ಸಂಬಳ ಜೀವನ ನಿರ್ವಹನೆ ಮಾಡುವಂತಿಲ್ಲ. ಬಡ ಕುಟುಂಬದ ನಮ್ಮ ಜೀವನದ ಬಗ್ಗೆ ಸರಕಾರ ಅನುಕಂಪದ ಕ್ರಮ ವಹಿಸಬೇಕೆಂದು ಕೋರಿದ್ದಾರೆ.

ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಡಿ ವೇತನ ಅನುಷ್ಠಾನಗೊಳಿಸಬೇಕು. ಕಾರ್ಮಿಕ ನಿಯಮಾವಳಿಗಳನ್ನು ಪಾಲಿಸಬೇಕೆಂದು ಆಗ್ರಹಿಸಿದ್ದಾರೆ. ಕನಿಷ್ಠ ವೇತನದಲ್ಲಿ ಗರಿಷ್ಠ ಕೆಲಸ ಮಾಡಿಸಿಕೊಳ್ಳುವ ಸರಕಾರ, ಕಾರ್ಮಿಕರ ಕಲ್ಯಾಣ ಸಹ ಆಗಬೇಕು ಎಂದು ಕೋರಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ್ ಸ್ವರಾಜ್ ಸಂಘದ ರಾಜ್ಯಾಧ್ಯಕ್ಷ ಜಾನ್ಸಕುಮಾರ ಕರೆಪ್ಪಗೋಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.