SHARE

ಬೆಳಗಾವಿ: ಕಣಬರಗಿ SC/ ST ಕಾಲೋನಿಗೆ ಸಮುದಾಯ ಭವನ ನಿರ್ಮಸಿಕೊಡುವಂತೆ ಸ್ಥಳೀಯ ಡಾ. ಬಾಬಾಸಾಹೇಬ ಅಂಬೇಡ್ಕರ್ ಯುವಕ ಸಂಘ ಆಗ್ರಹಿಸಿದೆ. ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸುಮಾರು 60ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸಿಸುವ ಗಲ್ಲಿಯಲ್ಲಿ ನೀರಿನ ಬಿಲ್ ತುಂಬಲು ಬಡವರಿಗೆ ಆಗುವುದಿಲ್ಲ. ಮಹಾನಗರ ಪಾಲಿಕೆ ದಲಿತ ಕಾಲೊನಿಯ ನಿರೀನ ಬಿಲ್ ಮುಕ್ತ ಮಾಡಬೇಕು ಎಂದು ಆಗ್ರಹಿಸಿದರು.