SHARE

ಬೆಳಗಾವಿ: ತೀವ್ರ ರಾಜಕೀಯ ಗುದ್ದಾಟ ಏರ್ಪಟ್ಟು, ಸರಕಾರ ಅಲುಗಾಡಿಸಿದ ಬೆಳಗಾವಿ PLD ಬ್ಯಾಂಕ್ ಪ್ರಕರಣ ಹಸಿ ಇರುವಾಗಲೇ ಅದರ ಅಧ್ಯಕ್ಷ ಮಹಾದೇವ ಪಾಟೀಲ ಹೃದಯಾಘಾತದಿಂದ ಅಸುನೀಗಿದ್ದಾರೆ. ಇಂದು ಬ್ಯಾಂಕಿಗೆ ಆಗಮಿಸಿ ನಂತರ ಫುಲಬಾಗ್ ಗಲ್ಲಿಯ ಸಂಭಂಧಿಕರ ಮನೆಗೆ ತೆರಳಿದ್ದ ಮಹಾದೇವ ಅವರಿಗೆ ಸುಸ್ತು ಕಾಣಿಸಿಕೊಂಡಿದೆ. ನಂತರ ಹೃದಯಾಘಾತವಾಗಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬಣದಲ್ಲಿ ಗುರುತಿಸಿಕೊಂಡು PLD ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಎಂಇಎಸ್ ಕಾರ್ಯಕರ್ತರಾಗಿದ್ದ ಮಹಾದೇವ ಪಾಟೀಲ ಸುದೀರ್ಘಾವಧಿಯಿಂದ ಗಡಿ ಹೋರಾಟದಲ್ಲಿ ಎಂಇಎಸ್ ಕಟ್ಟಾಳು ಆಗಿದ್ದರು.