SHARE

ಹೊಸದಿಲ್ಲಿ: ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ಸ್ ಸಮಿತಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಔಟ್ ಆಗಿದ್ದಾರೆ. ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ಡಾ. ಪುಷ್ಪಾ ಅಮರನಾಥ್ ಅವರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹಲೋಟ ಆದೇಶ ಹೊರಡಿಸಿದ್ದಾರೆ.ಡಾ. ಪುಷ್ಪಾ ಅಮರನಾಥ್ ಮೈಸೂರು ಜಿಲ್ಲಾ ಪಂಚಾಯತಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದರು. ಸಧ್ಯ ಎಐಸಿಸಿ ಸದಸ್ಯೆ, ಮತ್ತು ಕೆಪಿಸಿಸಿಯ ಕಾರ್ಯದರ್ಶಿಯು ಆಗಿದ್ದಾರೆ.