SHARE

ಬೆಳಗಾವಿ: ಕರಡಿ ದಾಳಿಯಿಂದ ಇತ್ತೀಚೆಗೆ ಮೃತಪಟ್ಟ ಖಾನಾಪುರ ತಾಲೂಕಿನ ಕೌಂದಲ ಗ್ರಾಮದ ಅಣ್ಣು ಪಾಟೀಲ ಹಾಗೂ ನರಿ ದಾಳಿಯಿಂದ ಮೃತಪಟ್ಟ ಬಸರಿಕಟ್ಟಿ ಗ್ರಾಮದ ಗಂಗವ್ವ ರುದ್ರಪ್ಪ ಚವ್ಹಾನ ಅವರಿಗೆ ಅರಣ್ಯ ಇಲಾಖೆಯ ಸಹಾಯ ಧನವನ್ನು ಶಾಸಕಿ ಡಾ. ಅಂಜಲಿ ನಿಂಬಾಳಕರ ಹಸ್ತಾಂತರಿಸಿದರು.ಎರಡೂ ಕುಟುಂಬಗಳಿಗೆ ತಲಾ ₹5ಲಕ್ಷ ಪರಿಹಾರ ಹಣ ನೀಡಲಾಯಿತು.ಡಿಸಿಎಫ್ ಎಂ. ವಿ. ಅಮರನಾಥ ಪರಿಹಾರ ಧನ ಬಿಡುಗಡೆ ಮಾಡಿದ್ದರು. ಎಸಿಎಫ್ ಸಿ. ಬಿ. ಪಾಟೀಲ, ಆರ್ ಎಫ್ ಓ ಬಸವರಾಜ ವಾಳದ, ಪಪಂ. ಇಓ ಲಕ್ಷಮಣರಾವ ಯಕ್ಕುಂಡಿ ಹಾಗೂ ಅರಣ್ಯ ಸಿಬ್ಬಂಧಿ ಉಪಸ್ಥಿತರಿದ್ದರು.