SHARE

ಬೆಳಗಾವಿ: ಉಡಾನ್ ಯೋಜನೆಯಲ್ಲಿ ಬೆಳಗಾವಿ ಸೇರ್ಪಡೆಯಾಗಿದೆ ಎಂದು ಸಂಸದ ಸುರೇಶ ಅಂಗಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿದ ಅವರು ಮೂರನೇ ಉಡಾನ್ ಯೋಜನೆಯಲ್ಲಿ ಬೆಳಗಾವಿ ಸತತ ಪ್ರಯತ್ನದ ಮೂಲಕ ಸೇರ್ಪಡೆಯಾಗಿದ್ದು, ವಿಮಾನಯಾನದಲ್ಲಿ ಬೆಳಗಾವಿಗೆ ಸಾಕಷ್ಟು ಸಹಾಯ ಆಗಲಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವರಾದ ಜಯಂತ ಸಿನ್ಹಾ, ಸುರೇಶ ಪ್ರಭು ಅವರಿಗೆ ಸಂಸದ ಸುರೇಶ ಅಂಗಡಿ ಧನ್ಯವಾದ ತಿಳಿಸಿದರು.