SHARE

ಬೆಳಗಾವಿ: ಟಿಪ್ಪು ಸುಲ್ತಾನ್ ಇಸ್ಲಾಂ ಧರ್ಮದವರಾಗಿದ್ದರೂ ಸಹ ಒಬ್ಬ ಅಪ್ಪಟ ಕನ್ನಡಿಗರಾಗಿದ್ದರು. ಕರ್ನಾಟಕದ ಪರವಾಗಿದ್ದರು ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಇಂದು ನಗರದಲ್ಲಿ ಟಿಪ್ಪು ಜಂಯಂತಿ ಆಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಪ್ರೇಮಿ ಎನ್ನುವುದಕ್ಕೆ ಸಿದ್ದರಾಮಯ್ಯ, ದೇವೇಗೌಡರೇ ಸಾಕ್ಷಿ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್​.ಡಿ ದೇವೇಗೌಡ ಇವರಿಬ್ಬರಿಗೂ ಸ್ವಲ್ಪವೂ ಉರ್ದ ಬರಲ್ಲ‌. ಟಿಪ್ಪು ಉರ್ದು ಹೇರಿಕೆ ಮಾಡಿದಿದ್ರೆ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ರೀತಿ ಅವರೂ ಶಾಹರಿ ಹೇಳತ್ತಿದ್ರು ಎಂದರು.