SHARE

ಬೆಳಗಾವಿ: ಫೊಟೊಗ್ರಾಫಿಯಲ್ಲಿ ತನ್ನದೇ ಛಾಪು ಮೂಡಿಸಿಕೊಂಡಿರುವ ಬಡಿಗೇರ ಫೊಟೋಸ್ ಈಗ ಫೊಟೊ ಮ್ಯಾಗಜಿನ್ ಸೇವೆಗೆ ನೀಡಿದೆ. ವಿವಿಧ ಸ್ಮರಣೀಯ, ಅಪರೂಪದ ಫೋಟೊಗ್ರಾಫ್ ಗಳಿಗೆ ಮೀಸಲಾದ ಮಾಸಿಕ ” ‘ಬೆಳಗಾವಿ ಇಮೇಜಿಸ್’ ಮಾಸಿಕ ಇಂದು ಬಿಡುಗಡೆಯಾಯಿತು. ಬೆಳಗಾವಿಯ ಲಕ್ಷ್ಮೀಟೇಕಡಿ ಹುಕ್ಕೇರಿ ಶ್ರೀ ಮಠದಲ್ಲಿ ಬೆಳಗಾವಿ ಸಂಸದ ಸುರೇಶ ಅಂಗಡಿ ಬಿಡುಗಡೆ ಮಾಡಿದರು. ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜೀ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಅಭಯ ಪಾಟೀಲ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಹೃಷಿಕೇಶ ದೇಸಾಯಿ, ವಿವೇಕ ಮಹಾಲೆ, ಗುರುನಾಥ ಕಡಬೂರು, ಮಾಸಿಕ ಸಂಪಾದಕ ಪಿ.ಕೆ.ಬಡಿಗೇರ ಇತರರು ಭಾಗವಹಿಸಿದರು.