SHARE

ಬೆಳಗಾವಿ: ರೈತರ ಕಬ್ಬಿನ ಬಾಕಿ ಬಿಲ್ ಮತ್ತು ಎಫ್ ಆರ್ ಪಿ ಹೋರಾಟಕ್ಕೆ ಸಂಬಂಧಿಸಿ ನಡೆದ ಪ್ರಾದೇಶಿಕ ಆಯುಕ್ತರ ಜೊತೆಗಿನ ಸಭೆ ವಿಫಲವಾಗಿದ್ದು, ರೈತರಿಗೆ ಬೆಳಗಾವಿ ಬಾರ್ ಅಸೊಸಿಯೇಶನ್ ಬೆಂಬಲ ಸಿಕ್ಕಿದೆ. ಬೆಳಗಾವಿ ಬಾರ್ ಅಧ್ಯಕ್ಷ ಎಸ್. ಎಸ್. ಕಿವಡಸನ್ನವರ, ಹಿರಿಯ ವಕೀಲ ಎ. ಜಿ. ಮುಳವಾಡಮಠ ನೇತ್ರತ್ವದಲ್ಲಿ ಹಿರಿಯ ವಕೀಲರು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ರೈತ ಹೋರಾಟಕ್ಕೆ ಬೆಂಬಲಿಸಿದ್ದು, ಸದ್ಯದಲ್ಲೇ ಜಿಲ್ಲೆಯಾದ್ಯಂತ ವಕೀಲರ ಹೋರಾಟ ಹಾಗೂ ಕಲಾಪ ಬಹಿಷ್ಕಾರ ಸಂಘಟಿಸಲಾಗುವುದು, ದಿನಾಂಕ ನಿಗದಿ ಸದ್ಯದಲ್ಲೇ ಮಾಡಲಾಗುವುದು ಎಂದು ಬೆಳಗಾವಿ ಬಾರ್ ಅಸೊಸಿಯೇಶನ್ ಘೋಷಿಸಿದೆ. ಬಾಕಿ ಹಣ ಬರಬೇಕಾದ ರಸೀಟ್ ಹೊಂದಿದ ರೈತರ ಪರವಾಗಿ ಹೈಕೋರ್ಟ್ ನಲ್ಲಿ ಕಾರ್ಖಾನೆಗಳ ವಿರುದ್ಧ ದಾವೆ ಹೂಡುವುದಾಗಿ ಬೆಳಗಾವಿ ವಕೀಲರ ಸಂಘ ತಿಳಿಸಿದ್ದು, ರೈತ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ.