SHARE

ಬೆಳಗಾವಿ: ದೇಶದಲ್ಲೇ ಪ್ರಖ್ಯಾತಿ ಪಡೆದ ಮಾಸ್ಟರ್ ಶೈಫ್ ಪದ್ಮಶ್ರೀ ಸಂಜೀವ್ ಕಪೂರ್ ಬೆಳಗಾವಿಗೆ ಭೇಟಿ ನೀಡಿದರು.
ನಗರದ ಡಾ. ಅಂಬೇಡ್ಕರ್ ರಸ್ತೆಯ ಖಾಸಗಿ ಹೊಟೇಲ ‘ಸುರವೆ’ಯಲ್ಲಿ ಮಾಧ್ಯಮಗಳೊಂದಿಗೆ ಸಂದರ್ಶನದ ಮುಖಾಂತರ ಎದುರಾದರು.

…ಸಚ್ ಬೊಲೊ ಸುಖಿ ರಹೊ…ಸುವಾರ್ತೆಯೊಂದಿಗೆ ಮಾತಿಗೆ ನಿಂತ ಸಂಜೀವ್ ಬೆಳಗಾವಿ ಮೊದಲಿಂನಂತೆ ಇಲ್ಲ. ಈಗ ಸಾಕಷ್ಟು ಸುಂದರವಾಗಿ ಬದಲಾಗಿದೆ. ಜನರ ಬೇಡಿಕೆಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿವೆ. ನಾನು ಲೂಧಿಯಾನ, ಜಲಂಧರ್, ಕಲಕತ್ತ ಸೇರಿ ಇತರ ನಗರಗಳಲ್ಲಿ ಶೈಫ್ ಆಗಿ ಕೆಲಸ ನಿರ್ವಹಿಸಿದ್ದೇನೆ. ನಮ್ಮ ಆಹಾರದ ಮೇಲೆ ಸಾಕಷ್ಟು ಉದ್ಯೋಗ ಉದ್ಯಮಗಳು ನಡೆಯುತ್ತವೆ. ಮೆಟ್ರೋ ನಗರಗಳಿಗೆ ಮಾತ್ರ ಮಾನವ ಸೌಲಭ್ಯಗಳು ಇರಬಾರದು ಟು ಟೈಯರ್ ಸಿಟಿ, ನಗರ- ಪಟ್ಟಣಗಳಿಗೂ ಬರಬೇಕು ಎಂದರು.

ಭಾರತೀಯ ಹಾಗೂ ಪಾಶ್ಚಾತ್ಯ ಖಾದ್ಯಗಳ ಪರಿಚಯ ಇಂದಿನ ಯುವ ಜನಾಂಗಕ್ಕೆ ಹೆಚ್ಚು ಆಸಕ್ತಿದಾಯಕ ಎಂದರು. ಆರೋಗ್ಯಕರ ಆಹಾರ ಮತ್ತು ಖಾದ್ಯ ಜನರ ಬೇಡಿಕೆ ಆಗಿದೆ. ರೆಸ್ಟೊರೆಂಟಗಳು ಈ ಬೇಡಿಕೆ ಈಡೇರಿಸಬಹುದೇ ಎಂಬ ಪ್ರಕಾರ ಪ್ರಶ್ನೆಗೆ ‘ಖಂಡಿತ’ ಎಂಬ ಉತ್ತರ ನನ್ನದು ಎಂದರು. ದೊಡ್ಡ ನಗರಗಳು ಮತ್ತು ಬೆಳೆಯುತ್ತಿರುವ ನಗರಗಳ ಮಧ್ಯೆ ಸೌಲಭ್ಯಗಳ ಕೊರತೆ ಜಾಣದಂತೆ ಮಾಡಬೇಕಾಗಿದೆ. ಈ ಅಂತರಕ್ಜೆ ಸೇತುವೆ ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದರು.

Frozen food ಉದ್ಯಮವೂ ಸಹ ಇಂದಿನ ಎಮರ್ಜ ಆಹಾರ ಉದ್ಯಮವಾಗಿದೆ ಎಂದು ಸಂಜೀವ್ ಕಪೂರ ತಿಳಿಸಿದರು. ಆಹಾರ ಸಿದ್ದಪಡಿಸುವ ವೃತ್ತಿಯ ಬಗ್ಗೆಯೇ ತಿಳಿಯದು ನಾನು ಅಪ್ಪಿತಪ್ಪಿ ಬಂದೆ. ಅಡಿಗೆ ಮಾಡುವ ಕೆಲಸ ಬಹಳ ಸಂತೃಪ್ತಿ ತಂದು ಕೊಡುತ್ತದೆ. ಪುಡ್ ಚಾನಲ್ ಗಳ ಮೂಲಕ ಸಹ ಇಂದು ಉತ್ತಮ ಅಡುಗೆ ಮಾಡುವ ಕಲೆ ಜನರಲ್ಲಿ ಕರಗತವಾಗುತ್ತಿದೆ. ಅಡುಗೆ ಮಾಡುವ ಕೆಲಸ ಬಹಳ ಹಗುರವಾಗಿ ತೆಗೆದುಕೊಳ್ಳಬಾರದು. ಆಹಾರ ಮಾಡುವ ಕೆಲಸ ಸೆಲೆಬ್ರಿಟಿ ಆಗಲಿ ಎಂದು ನಾನು ಆಶಿಸುತ್ತೇನೆ ಎಂದರು. ಅಡುಗೆ ಮಾಡುವುದು ಮತ್ತು ಅದನ್ನು ಸಂತೃಪ್ತಿಯಿಂದ ತಿನ್ನುವುದು ಸಹ ಒಂದು ದೊಡ್ಡ ಕಲೆ ಎಂದು ಪ್ರತಿಪಾದಿಸಿದರು. ಅಡುಗೆಯಲ್ಲಿನ ತಪ್ಪುಗಳನ್ನು ಹುಡುಕುವ ಬದಲು, ಮಾಡಿದ್ದನ್ನು ಸಮಚಿತ್ತ ಮತ್ತು ಅಪಾರ ಗೌರವದಿಂದ ತಿನ್ನುವುದೇ ದೊಡ್ಡ ಕಲೆ ಎಂದು ತಿಳಿಸಿದರು.

Power of cooking ಸದ್ಯ ಹೆಚ್ಚು ಪ್ರಸ್ತುತವಾಗಿದೆ. ಮನೆಯಲ್ಲಿ ಮಹಿಳೆಯರಿಗೆ ಅವರ ಅಭಿರುಚಿಯ ಅಡುಗೆ ತಯಾರಿಸಲು ಸಾಕಷ್ಟು ಸ್ವಾತಂತ್ರ್ಯ ನೀಡಬೇಕು ಎಂದು ಕರೆ ನೀಡಿದರು. ತಮ್ಮ ಪ್ರದೇಶದಲ್ಲಿ ಹೆಚ್ಚು ಸಿಗುವ ಯಾವುದೇ ಆಹಾರ ಪದಾರ್ಥ ಸೇವಿಸಬೇಕು. ಪಾಶ್ಚಾತ್ಯ ಆಹಾರ ಸಾಮಗ್ರಿಗಳನ್ನು ಹುಡುಕಾಡಿ ತಿನ್ನುವ ಖಯಾಲಿ ಅಷ್ಟಾಗಿ ಸರಿ ಹೊಂದದು ಎಂದರು. ಇಂಥದ್ದೆ ಆಹಾರ ಸೇವಿಸಿರಿ ಎಂಬ ಸಲಹೆ ಕೊಟ್ಟು ಕೆಲವರು ಉದ್ಯಮ ವ್ಯಾಪಾರ ಮಾಡುತ್ತಾರೆ. ಅದಕ್ಕೆ ಮರುಳಾಗದೇ ನಿಮ್ಮ ದೇಶಿ ಆಹಾರ ಪದ್ಧತಿಯನ್ನೇ ಹೆಚ್ಚು ನೆಚ್ಚಿಕೊಳ್ಳಿ ಎಂದರು ಸಂಜೀವ್ ಕಪೂರ್.