SHARE

ಬೆಳಗಾವಿ: ಆಟೋ ನಗರದ ಕೆಎಸ್‌ಸಿಎ ಮೈದಾನದಲ್ಲಿ ನ.೨೦ ರಿಂದ ೨೩ ವರೆಗೆ ಮುಂಬೈ ಮತ್ತು ಕರ್ನಾಟಕ ತಂಡಗಳ ಮಧ್ಯೆ ರಣಜಿ ಕ್ರಿಕೆಟ್ ಪಂದ್ಯ ನಡೆಯಲಿದೆ ಎಂದು ಕೆಎಸ್‌ಸಿಎ ಮೆಂಬರ್ ಅವಿನಾಶ್ ಪೋತದಾರ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗಾವಿಯಲ್ಲಿ ನ.೨೦ರಿಂದ ೨೩ರವರೆಗೆ ಕರ್ನಾಟಕ ಮತ್ತು ಮುಂಬೈ ತಂಡಗಳ ನಡುವೆ ರಣಜಿ ಪಂದ್ಯ ಆಯೋಜಿಸಲಾಗಿದೆ. ನ.೧೮ ರಿಂದ ಉಭಯ ತಂಡಗಳು ಅಭ್ಯಾಸ ಮಾಡಲಿವೆ. ಇದೇ ಮೊದಲ ಬಾರಿಗೆ ಡಿಜಿಟಲ್ ಸ್ಕೋರ್ ಬೋರ್ಡ್ ಬಳಕೆ ಮಾಡಲಾಗುತ್ತಿದೆ. ಈ ಪಂದ್ಯ ವಿಕ್ಷಣೆಗೆ ಆಗಮಿಸುವ ಕ್ರೀಡಾಭಿಮಾನಿಗಳಿಗೆ ಉಚಿತ ಪ್ರವೇಶ ನೀಡಲಾಗುವುದು. ಅಲ್ಲದೇ ಬರುವ ಡಿ.೨೩ರಿಂದ ೨೬ರವರೆಗೆ U19 ರಣಜಿ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ತಂಡಗಳು ಸೆಣಸಾಡಲಿವೆ ಎಂದರು.

ಕರ್ನಾಟಕ ತಂಡದಲ್ಲಿ ಆರ್. ವಿನಯಕುಮಾರ, ಸ್ಟುವರ್ಟ ಬಿನ್ನಿ, ಎ.ಮಿಥುನ ಹಾಗೂ ಮುಂಬೈ ತಂಡದಲ್ಲಿ ಸೂರ್ಯಕುಮಾರ ಯಾದವ, ಧವಲ ಕುಲಕರ್ಣಿ, ಗಣೇಶ ಅಯ್ಯರ್, ವಿನಾಯಕ ಸಾಮಂತ ಸೇರಿ ಇತರರು ಭಾಗವಹಿಸಲಿದ್ದಾರೆ ಎಂದರು.