SHARE

ಬೆಳಗಾವಿ: ಹಿರಿಯ ಐಎಎಸ್ ಅಧಿಕಾರಿ, ಕೇಂದ್ರ ಸರಕಾರದ ಕಾರ್ಯದರ್ಶಿ ಹಾಗೂ CDFI ಚೇರ್ಮನ್ ಡಾ. ಅಶೋಕ ದಳವಾಯಿ ಪ್ರತಿಷ್ಠಿತ ಡ್ಯಾನಫೋಸ್ ಪ್ರಶಸ್ತಿ ಪಡೆದಿದ್ದಾರೆ.
‘Danfoss ICE Exemplary thought leadership 2018’ ಅವಾರ್ಡನ್ನು ಹೈದ್ರಾಬಾದನಲ್ಲಿ ಇಂದು ನೀಡಲಾಯಿತು.

ದೇಶದ ಕೃಷಿ ಕ್ಷೇತ್ರದ ಉನ್ನತಿ, ರೈತರ ಬೆಳೆ ಮತ್ತು ಅವರ ಆದಾಯ ಗುಣಮಟ್ಟ ಮಾಡುವಲ್ಲಿ ಶ್ರಮಿಸುತ್ತಿರುವ ಕೇಂದ್ರ ಕೃಷಿ ಕಾರ್ಯದರ್ಶಿ ಹಾಗೂ Committee on doubling farmers income ಚೇರಮನ್ ಆಗಿರುವ ಡಾ. ಅಶೋಕ ದಳವಾಯಿ ಅವರಿಗೆ ನಾಯಕತ್ವ ವಿಭಾಗದಲ್ಲಿ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯ ಶ್ರೇಯ ಕೇಂದ್ರ ಸರಕಾರ ಮತ್ತು ಕೃಷಿ ಮಂತ್ರಾಲಯಕ್ಕೆ ಸಲ್ಲಬೇಕು ಎಂದು ಡಾ. ಅಶೋಕ ದಳವಾಯಿ ತಿಳಿಸಿದ್ದಾರೆ.