SHARE

ಬೆಳಗಾವಿ: ಸಚಿವ ಸ್ಥಾನ ಕೊಟ್ಟರೆ ತಾನು ನಿಭಾಯಿಸಲು ಸಿದ್ಧ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ. ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಪಕ್ಷ ತೆಗೆದುಕೊಳ್ಳುವ ನಿರ್ಧಾರ ನನ್ನ ನಿರ್ಧಾರವಾಗಿದೆ ಎಂದರು. ರೈತ ಮಹಿಳೆಗೆ ಸಿಎಂ ಕುಮಾರಸ್ವಾಮಿ ಅವರು ಮಾತನಾಡಿದ್ದರಲ್ಲಿ ಅಪಾರ್ಥ ಕಲ್ಪಿಸಬೇಕಿಲ್ಲ. ಈಗಾಗಲೇ ಸಿಎಂ ಸಹ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಠನೆ ಕೊಟ್ಟಿದ್ದಾರೆ ಎಂದರು. ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಗೆ ನನಗೆ ಆಹ್ವಾನ ಬಂದಿಲ್ಲ. ನಾನು ಈಗ ಸಕ್ಕರೆ ಕಾರ್ಖಾನೆ ತೆರೆದಿದ್ದು ರೈತರಿಗೆ ಮುಂದಿನ ದಿನಗಳಲ್ಲಿ ನ್ಯಾಯ ಒದಗಿಸುವ ಉದ್ದೇಶ ಇದೆ ಎಂದರು. ಸಕ್ಕರೆ ಕಾರ್ಖಾನೆಗಳು ರೈತರಿಗೆ ನ್ಯಾಯಯುತವಾದ ಕಬ್ಬಿನ ಬೆಲೆ ಕೊಟ್ಟು, ಬಾಕಿ ಚುಕ್ತಾ ಮಾಡಬೇಕು ಎಂದು ಹೆಬ್ಬಾಳಕರ ಪ್ರತಿಪಾದಿಸಿದರು.