SHARE

ಬೆಳಗಾವಿ: ಬೆಳಗಾವಿಯಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಅಧಿಕಾರಿಗಳು ಬೆಪ್ಪಾಗಿದ್ದು, ತಮ್ಮ ಇಲಾಖೆಯ ಕಾರ್ಯಕ್ರಮ ಬಿಟ್ಟು ಇಬ್ಬರು ಹಿರಿಯ ಅಧಿಕಾರಿಗಳು ರಜೆ ಮೇಲೆ ತೆರಳಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಬಾಯಕರು ಒಣಪ್ರತಿಷ್ಠೆ ಈಗ ಆಡಳಿತ ಯಂತ್ರವನ್ನೇ ಹದಗೆಡಿಸಿದ್ದು, ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ.

ಜಾರಕಿಹೊಳಿ ಸಹೋದರರು ಹಾಗೂ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ನಡುವೆ ರಾಜಕೀಯ ಸಮನ್ವತೆ ಕಾಣದೆ ಮತ್ತೆ ಕಂದಕ ಹೆಚ್ಚಿದೆ. ಇಂದು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗ್ರಾಮಗಳಿಗೆ ನೀಡಲಾದ ಸುಸಜ್ಜಿತ 6ಬಸ್ ಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಲಿದ್ದಾರೆ. ಸದರಿ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಆಹ್ವಾನ ಕೊಡಲು ಅಸಹಾಯಕರಾದ ಡಿವಿಜನಲ್ ಕಂಟ್ರೋಲರ್ ಮಹಾದೇವ ಮುಂಜಿ ಮತ್ತು ಲೇಬರ್ ಆಫಿಸರ್ ಹಾಗೂ ಹಂಗಾಮಿ ಡಿಟಿಓ ಅನಾರೋಗ್ಯ ರಜೆ ಮೇಲೆ ತೆರಳಿರುವುದು ಸ್ಪಷ್ಠವಾಗಿದೆ.

ಇಂದು ಹಂಗರಗಾ ಗ್ರಾಮದಲ್ಲಿ ಮತ್ತು ಗ್ರಾಮೀಣ ಕ್ಷೇತ್ರದ ಇತರೆಡೆ ಬಸ್ ಉದ್ಘಾಟನೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಕೈಯಿಂದ ನಡೆಯಲಿದೆ. ರಾಜಕೀಯ ವೈಮನಸ್ಸಿಗೆ ಎಡೆಯಾದ ನಾಯಕರು ಒಂದೇ ಕಾರ್ಯಕ್ರಮ ಹಂಚಿಕೊಳ್ಳದ್ದರಿಂದ ಅಧಿಕಾರಿಗಳು ಮಾತ್ರ ಇಕ್ಕಟ್ಟು ಅನುಭವಿಸಿದ್ದಾರೆ. ಹಂಗರಗಾದಲ್ಲಿ ಆರು ಬಸಗಳು ಉದ್ಘಾಟನೆ ಆಗುವುದು ಖಚಿತವಾಗಿದೆ.