SHARE

ಬೆಳಗಾವಿ: ಪ್ರಕರಣವೊಂದಕ್ಕೆ ಸಂಬಂಧಿಸಿ, ನ್ಯಾಯವಾದಿಯೊಬ್ಬರಿಗೆ ಇನ್ಸಪೆಕ್ಟರ್ ಕೇಶವ ಟಿಂಗರಿಕರ ದೂರವಾಣಿಯಲ್ಲಿ ಬೆದರಿಸಿದರು ಎಂಬ ವಿಷಯಕ್ಕೆ ನ್ಯಾಯವಾದಿಗಳು ಕೋರ್ಟ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ನ್ಯಾಯವಾದಿ ವಿ. ಎಸ್. ಕರಜಗಿ ಎಂಬುವವರಿಗೆ ಕಿಡ್ನಾಪ್ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಧಮಕಿ ಹಾಕಿದ್ದರಿಂದ ಬಾರ್ ಅಸೊಸಿಯೇಶನ್ ಪದಾಧಿಕಾರಿಗಳು ಅಸಮಧಾನ ವ್ಯಕ್ತಪಡಿಸಿ ಜಿಲ್ಲಾ ನ್ಯಾಯಾಧೀಶರಿಗೂ ಮನವಿ ಸಲ್ಲಿಸಿದರು. ಪ್ರಧಾನ ಜಿಲ್ಲಾ ನ್ಯಾಯಾಧೀಶರ ಆರ್. ಜೆ. ಸತೀಶಸಿಂಗ್ ತಮ್ಮ ಚೇಂಬರ್ ಗೆ ಇನ್ಸಪೆಕ್ಟರ್ ಕೇಶವ ಟಿಂಗರಿಕರ ಅವರನ್ನು ಕರೆಯಿಸಿ ಪ್ರಕರಣದ ಮಾಹಿತಿ ಪಡೆದುಕೊಂಡರು. ಪಿಡಿಜೆ ಕೋರ್ಟ್ ಆವರಣದಲ್ಲಿ ನೂರಾರು ನ್ಯಾಯವಾದಿಗಳು ಸೇರಿಬಂದಿದ್ದರು.