SHARE

ಬೆಳಗಾವಿ: ಕನ್ನಡದಲ್ಲಿ ಮಾತನಾಡಿದ ಅಧಿಕಾರಿ ಸಭೆಗೆ ಆಗಮಿಸಿ ಕ್ಷಮೆ ಕೇಳಬೇಕು ಎಂದು ಎಂಇಎಸ್ ಜಿಪಂ. ಸದಸ್ಯೆ ಸರಸ್ವತಿ ಪಾಟೀಲ ಗದ್ದಲ ಎಬ್ಬಿಸಿದರು. ಅರಣ್ಯಾಧಿಕಾರಿ ಶ್ರೀನಾಥ ಕಡೋಲಕರ ಅವರು ದೂರವಾಣಿಯಲ್ಲಿ ತನ್ನೊಂದಿಗೆ ಕನ್ನಡದಲ್ಲಿ ಮಾತನಾಡಿದ್ದಾರೆ ಎಂಬುವುದು ಸದಸ್ಯೆಯ ಆಕ್ಷೇಪಕ್ಕೆ ಕಾರಣ. ಅರಣ್ಯಾಧಿಕಾರಿ ತನ್ನೊಂದಿಗೆ ಮರಾಠಿ ಇಲ್ಲವೇ ರಾಷ್ಟ್ರಭಾಷೆ ಹಿಂದಿಯಲ್ಲಿ ಮಾತನಾಡಬೇಕಿತ್ತು. ಎಂದು ಸರಸ್ವತಿ ಪಾಟೀಲ ಸಲಹೆ ನೀಡಿದರು. ಅರಣ್ಯ ಅಧಿಕಾರಿಯನ್ನು ಕರೆಯಿಸಿ ಘಟನೆಯ ಮಾಹಿತಿ ಪಡೆಯುವುದಾಗಿ ಜಿಪಂ. ಅಧ್ಯಕ್ಷೆ ಆಶಾ ಐಹೊಳೆ ಹಾಗೂ ಸಿಇಓ ಆರ್. ರಾಮಚಂದ್ರನ ತಿಳಿಸಿದರು. ಜಿಪಂ. ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಅಶೋಕ ಪಾಟೀಲ ಅವರನ್ನು ಸಭೆಯಲ್ಲಿ ಬೆದರಿಸುವ ಯತ್ನ ಜಿಪಂ. ಸದಸ್ಯೆ ನಡೆಸಿದರು.