SHARE

ಬೆಳಗಾವಿ: ನೀರು ಕುಡಿಯಲು ಪ್ಲಾಸ್ಟಿಕ್ ಲೋಟ ನೀಡಿದಕ್ಕಾಗಿ ಜಿಪಂ ಸದಸ್ಯರಿಂದ ಇಂದು ಆಕ್ಷೇಪವಾಗಿದೆ. ಇಂದು ನಡೆದ ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯಲ್ಲಿ ಎಂಇಎಸ್ ಸದಸ್ಯೆ ಒಬ್ಬರು ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಬ್ಯಾನ್ ಮಾಡಿದ್ದರೂ ಮತ್ತೆ ಜಿಲ್ಲಾ ಪಂಚಾಯತ ಸಭೆಯಲ್ಲಿ ಸದಸ್ಯರಿಗೆ ಕುಡಿಯಲು ನೀರು ಕೊಡಲು ಪ್ಲಾಸ್ಟಿಕ್‌ ಬಳಕೆಗೆ ವಿರೋಧ ಮಾಡಿದರು. ಉಚಗಾವಿ ಕ್ಷೇತ್ರದ ಎಂಇಎಸ್ ಜಿಲ್ಲಾ ಪಂಚಾಯತ ಸದಸ್ಯೆ ಸರಸ್ವತಿ ಪಾಟೀಲ್ ಈ ಆಕ್ಷೇಪ ಮಾಡಿದರು. ಪ್ಲಾಸ್ಟಿಕ್ ಗ್ಲಾಸ್ ತೆಗೆಯುವಂತೆ ಜಿಪಂ ಸಿಇಓ ಆರ್. ರಾಮಚಂದ್ರನ್ ಸೂಚಿಸಿದರು.