SHARE

ಬೆಳಗಾವಿ: ಚಳಿಗಾಲದ ಅಧಿವೇಶನದ ಮುನ್ನ ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಬೆಂಗಳೂರು ವತಿಯಿಂದ ತಮ್ಮ ಬೇಡಿಕೆಗಳ ಈಡೇರಿಕೆಗೆ ಬೃಹತ್ ಸಮಾವೇಶ ನಡೆಯಲಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಸಂಘದ ರಾಜ್ಯಾಧ್ಯಕ್ಷ ಅನಿಲ ಪೋತದಾರ ಸದ್ಯ ಪ್ರತಿ ಕ್ವಿಂಟಲಗೆ ₹83 ಕಮಿಷನ್ ಸಿಗುತ್ತಿದ್ದು, ಕಳೆದ ಬಜೆಟ್ ನಲ್ಲಿ ಘೋಷಿಸಿದ ₹100ನ್ನು ನೀಡಬೇಕು. ವ್ಯತ್ಯಾಸದ ಕಮಿಷನ್ ಮೊತ್ತ ಸಂದಾಯ ಮಾಡಬೇಕು. ಇಲ್ಲದಿದ್ದರೆ ಡಿಸೆಂಬರ್ ತಿಂಗಳ ಆಹಾರ ಧಾನ್ಯ ಎತ್ತುವಳಿ ಮಾಡುವುದಿಲ್ಲ ಎಂದು ಘೋಷಿಸಿದರು.

ಬಯೋಮೆಟ್ರಿಕ್ ವ್ಯವಸ್ಥೆಗೆ ಗ್ರಾಮೀಣ ಭಾಗಗಳಲ್ಲಿ ತಡೆರಹಿತ ಇಂಟರನೆಟ್ ಒದಗಿಸಿ, ವಯೋವೃದ್ಧರ ಬೆರಳಚ್ಚು ಮೂಡುತ್ತಿಲ್ಲ ಅವರ ಬಗ್ಗೆ ಸರಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು, ಎಲ್ಲ ಸಗಟು ಮಳಿಗೆಗಳಿಗೂ ಬಯೋಮೆಟ್ರಿಕ್ ಅಳವಡಿಸಿ ವೇ ಬ್ರಿಡ್ಜ್ ಸಳವಡಿಸಿ, ಉತ್ತಮ ಗುಣಮಟ್ಟದ ಆಹಾರ ಧಾನ್ಯ ಒದಗಿಸಿ ಎಂಬ ಬೇಡಿಕೆಗಳನ್ನು ಮಂಡಿಸಿದರು. ವಿಜಯ ತಾರದಾಳೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.