SHARE

ಬೆಳಗಾವಿ: ಶಾಂತಿ ಮತ್ತು ರಾಷ್ಟ್ರೀಯ ಏಕತಾ ಸಮ್ಮೇಳನ ನಗರದ ಶೇಖ್ ಕಾಲೇಜು ಆವರಣದಲ್ಲಿ ಜಮಿಯತ್ ಉಲಮಾ ಇ-ಬೆಳಗಾವಿ ಆಯೋಜಕತ್ವದಲ್ಲಿ ನಡೆಯಿತು. ಜಮಿಯತ್ ಇ- ಉಲ್ಮಾ ಇ-ಹಿಂದ್ ಪ್ರಧಾನ ಕಾರ್ಯದರ್ಶಿ ಹಜರತ್ ಮೌಲಾನಾ ಸಯ್ಯದ್ ಮಹಮೂದ್ ಅಸಾದ್ ಮದನಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಸಿಟ್ಟು ದ್ವೇಷಕ್ಕೆ, ಪ್ರೇಮದಿಂದ ಉತ್ತರ ಕೊಡಬೇಕು. ಇದರಿಂದ ಪರಸ್ಪರರಲ್ಲಿ ಶಾಂತಿ ಸೌಹಾರ್ಧತೆ ನೆಲೆಸುತ್ತದೆ. ಜಗತ್ತಿನಲ್ಲಿ ಸ್ವರ್ಗಸದೃಶ್ಯ ನಾಡು ಭಾರತ. ಹಲವು ಜಾತಿ-ಧರ್ಮಗಳ ಏಕತೆಯ ಸಾಂಸ್ಕೃತಿಕ ದೇಶವಾಗಿದ್ದು, ಎಲ್ಲ ನಾಗರಿಕರೂ ಹಿಂದೂಸ್ತಾನದ ಮೇಲೆ ಅಮಿತ ವಿಶ್ವಾಸ ಇಡಬೇಕಿದೆ ಎಂದು ಸಮಾವೇಶ ಅಭಿಪ್ರಾಯಪಟ್ಟಿದೆ. ಅಭಿಪ್ರಾಯ ಬೇಧಗಳು ಕಂಡುಬಂದರೂ ನಡೆಯುವ ಹಾದಿ ಮಾತ್ರ ಒಂದೇ ಆಗಿರುವುದು ಏಕತೆಯ ಪ್ರತೀಕ ಎಂದು ಮೊಹಮ್ಮದ್ ಅಸದ್ ಮದನಿ ಅಭಿಪ್ರಾಯಪಟ್ಟರು. ನಿಜಗುಣಾನಂದ ಮಹಾಸ್ವಾಮಿಜಿ, ಮುರುಘರಾಜೇಂದ್ರ ಮಹಾಸ್ವಾಮೀಜಿ, ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಪಾಧರ್ ಲೂಸಿಯೋ ಮಾಸ್ಕರನೆಸ್ ಹಾಗೂ ಕುಮಾರ ಕಾಳೆ ಭಾಗವಹಿಸಿದರು.