SHARE

ಬೆಳಗಾವಿ: ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರಕಾರಿ ನೌಕರರ ಸಂಘದ ವತಿಯಿಂದ ತಾಲೂಕು ಅಧ್ಯಕ್ಷರುಗಳ ಆಯ್ಕೆ ಪ್ರಕ್ರಿಯೆ ಭಾನುವಾರ ನಡೆಯಿತು. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ, ಶ್ರೀ ಪ್ರಸನ್ನನಾನಂದ ಸ್ವಾಮೀಜಿ ಅವರ ಸಾನಿದ್ಯದಲ್ಲಿ ಭಾನುವಾರ, ಬೆಳಗಾವಿ ಜಿಲ್ಲೆಗೆ ಸಂಬಂಧಿಸಿ ವಿವಿಧ ತಾಲೂಕುಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ಬೆಳಗಾವಿ ನಗರಕ್ಕೆ ಎಲ್. ಎಸ್. ಪಂಗನ್ನವರ, ಬೆಳಗಾವಿ ಗ್ರಾಮೀಣ ಭರಮಣ್ಣ ವೈ ತಳವಾರ, ಖಾನಾಪುರ ಕೆ. ಬಿ. ದೊಡವಾಡ, ಬೈಲಹೊಂಗಲ ವೈ. ಆರ್. ಖಾಂವಿ, ಸವದತ್ತಿ ಜೆ. ಬಿ. ತಳವಾರ, ರಾಮದುರ್ಗ ಅಶೋಕ ಏಣಿ, ಗೋಕಾಕ ಎಸ್. ಎ. ನಾಯಕ, ಹುಕ್ಕೇರಿ ಹೊಳೆಪ್ಪ ಎಲ್. ಪೂಜೇರಿ, ಮೂಡಲಗಿ ಚಂದ್ರಕಾಂತ ಮೂಟೆಪ್ಪಗೋಳ, ಚಿಕ್ಕೋಡಿ ಎಚ್. ಎಫ್. ನಾಯಕ, ರಾಯಬಾಗ ಡಿ. ಎನ್. ಹಾದಿಮನಿ, ಅಥಣಿ ವೈ. ಎಸ್. ನಾಯಕ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಸತೀಶ ಜಾರಕಿಹೊಳಿ, ಬೆಳಗಾವಿ ಜಿಲ್ಲೆಯ ಅಧ್ಯಕ್ಷ ಸಿದ್ರಾಯಿ ಶೀಗಿಹಳ್ಳಿ, ರಾಜೇಂದ್ರ ಪಂಗನ್ನವರ, ಚಂದ್ರಕಾಂತ ಪೊಲೀಸ್, ಪ್ರಧಾನ ಕಾರ್ಯದರ್ಶಿ ಮಂಜುನಾಥ ಸನದಿ, ಎಂ. ಎಂ. ಕೋಮನ್ನವರ, ಎಂ. ಎಸ್. ವಾಲ್ಮೀಕಿ ಸೇರಿ ಇತರರು ಉಪಸ್ಥಿತರಿದ್ದರು.