SHARE

ಬೆಳಗಾವಿ: ಶುಕ್ರವಾರ ಮಧ್ಯಾಹ್ನ ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಬಳಿ ಅಪಹರಣಕ್ಕೀಡಾದ ಮಗುವನ್ನು ಮಾರ್ಕೇಟ್ ಪೊಲೀಸರು ಪತ್ತೆ ಹಚ್ಚಿದ್ದಾರೆ. ನಾನಪ್ಪ(೫) ಎಂಬ ಬಾಲಕನನ್ನು ಮೊಹಮ್ಮದ ಶಫಿ ಕರೀಂಸಾಬ ಉದಗಟ್ಟಿ(35) ಎಂಬ ಡ್ರೈವರ್ ಮಗುವನ್ನು ಅಪಹರಿಸಿ ಬೈಕ್ ಮೇಲೆ ಕರೆದೊಯ್ದದ್ದು ಸಿಸಿಟಿವಿ ಫೂಟೇಜ್ ಲಭಿಸಿತ್ತು.

ಎಸಿಪಿ ಮಹಾಂತೇಶ್ವರ ಜಿದ್ದಿ ನೇತೃತ್ವದ ತಂಡ ತೀವ್ರ ತಪಾಸಣೆ ನಡೆಸಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆಂದ್ರ ಸಾರಿಗೆ ಸರಕಾರಿ ನೌಕರನಾಗಿರುವ ಮೊಹಮ್ಮದ್ ಶಫಿ ಕರಿಂಸಾಬ ಹೈದರಾಬಾದಗೆ ತೆರಳಿದ್ದು, ಇನ್ನಷ್ಟೇ ಬೆಳಗಾವಿಗೆ ಆಗಮಿಸಬೇಕಿದೆ. ಅನಗೋಳದ ತನ್ನ ಮನೆಯಲ್ಲಿ ಮಗುವನ್ನು ಬಿಟ್ಟು ಕರಿಂಸಾಬ ಹೈದ್ರಾಬಾದಗೆ ತೆರಳಿದ್ದ. ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಪ್ರಕರಣ ಗಂಭೀರವಾಗಿ ಪರಿಗಣಿಸಿ ತಂಡ ರಚಿಸಿದ್ದರು. ಅನಗೋಳದ ಮನೆ ಮೇಲೆ ದಾಳಿ ಮಾಡಿ ಪೊಲೀಸರು ಮಗುವನ್ನು ರಕ್ಷಿಸಿ ಕರೆತಂದಿದ್ದು, ಅಪಹರಣ ಮಾಡಿದ್ದನೆನ್ನಲಾದ ವ್ಯಕ್ತಿಯ ಮನೆಯವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಗುವನ್ನು ತಂದೆ ತಾಯಿಗೆ ಒಪ್ಪಿಸಲಾಯಿತು.