SHARE

ಕಾಶೀಮ ಹಟ್ಟಿಹೊಳಿ

ಖಾನಾಪುರ: ಕನ್ನಡ ನಾಡು, ನುಡಿ, ಭಾಷೆ ಇದು ಸಮಸ್ತ ಕನ್ನಡಡಿಗರ ಸ್ವಾಭಿಮಾನದ ಸಂಕೇತವಾಗಿದೆ ಎಂದು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ ಅಭಿಪ್ರಾಯಪಟ್ಟರು. ಗುರುವಾರದಂದು ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಮಠದಲ್ಲಿ ಜರುಗಿದ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಉದ್ಘಾಟನಾ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಖಾನಾಪುರ ತಹಶಿಲ್ದಾರ ಶಿವಾನಂದ ಉಳ್ಳೆಗಡ್ಡಿ ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿದ ಅವರು ಕನ್ನಡ ರಾಜ್ಯೋತ್ಸದ ಜೋತೆಗೆ ಹಲವಾರು ಕನ್ನಡಪರ ಕಾರ್ಯಕ್ರಮಗಳನ್ನು ಮಾಡುತ್ತಾ ಖಾನಾಪುರದ ಕನ್ನಡಿಗರು ಬೇಷ್ ಎನಿಸಿಕೊಂಡಿದ್ದಾರೆ. ಜೋತೆಗೆ ಈ ವರ್ಷ ನಡೆಯುವ ೬ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಾಡಳಿತ ಸಹಾಯ, ಸಹಕಾರ ನೀಡಲು ಸದಾ ಸಿದ್ಧವಿದೆ ಎಂದು ಮುಖ್ಯ ಅತಿಥಿಯಾಗಿ ಮಾತನಾಡಿದರು.

೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದ ದಿವ್ಯಸಾನಿದ್ಯವನ್ನು ವಹಿಸಿ ಮಾತನಾಡಿದ ಶ್ರಿ ಶಿವಪುತ್ರ ಮಹಾಸ್ವಾಮಿಗಳು, ಚಿಕ್ಕಮುನವಳ್ಳಿ ಗ್ರಾಮವು ಸುಮಾರು ವರ್ಷದ ಇತಿಹಾಸ ಹೊಂದಿರುವ ಗ್ರಾಮವಾಗಿದ್ದು, ಈ ಗ್ರಾಮವು ಅಧ್ಯಾತ್ಮಿಕತೆಗೆ ಹೆಚ್ಚಿನ ಹೆಸರು ವಾಸಿಯಾಗಿದೆ. ಇದರ ಜೋತೆಗೆ ಈ ಬಾರಿ ತಾಲೂಕಿನ ೬ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳುವುದರ ಮೂಲಕ
‘ಕನ್ನಡ ನುಡಿ ಜಾತ್ರೆ’ ಯನ್ನು ಹಮ್ಮಿಕೊಂಡಿದ್ದು ತುಂಬಾ ಸಂತೋಷದ ವಿಷಯವಾಗಿದೆ.

ಆಮಂತ್ರಣ ಪತ್ರಿಕೆ ಉದ್ಘಾಟನಾ ಸಮಾರಂಭದ‌ ಕುರಿತು ಗ್ರಾಮದ ಉತ್ಸಾಹಿ ಕರವೇ ತಾಲೂಕಾ ಪ್ರಧಾನ ಕಾರ್ಯದರ್ಶಿ ದಶರಥ ಬನೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕಾ ಕಸಾಪ ಅಧ್ಯಕ್ಷ ವಿಜಯ ಬಡಿಗೇರ, ಗೌರವಾಧ್ಯಕ್ಷ ಈಶ್ವರ ಸಂಪಗಾವಿ, ರಾಜು ಖಾತೇದಾರ, ಮಹಾಂತೇಶ ಕೊಡೊಳ್ಳಿ, ರುದ್ರೇಶ ಸಂಪಗಾವಿ, ಗ್ರಾಮದ ಹಿರಿಯರು, ಕನ್ನಡಾಭಿಮಾನಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಈರಣ್ಣಾ ನಿರೂಪಿಸಿದರು, ಬಿಷ್ಟಪ್ಪಾ ಬನೋಶಿ ಸ್ವಾಗತಿಸಿದರು.