ಯಾರು ಅಧಿಕೃತ, ಯಾರು ಹಿತವರು ಈ ಇಬ್ಬರಲ್ಲಿ!?

ಯಾರು ಅಧಿಕೃತ, ಯಾರು ಹಿತವರು ಈ ಇಬ್ಬರಲ್ಲಿ!?

SHARE

ಬೆಳಗಾವಿ: ಬೆಳಗಾವಿ ತಾಲೂಕಿಗೆ ಈಗ ಇಬ್ಬರು ಸಬ್ ರಿಜಿಸ್ಟ್ರಾರ್ ಕೆಲಸ ನಿರ್ವಹಿಸುತ್ತಿದ್ದು, ಯಾರು ಅಧಿಕೃತ ಎಂಬ ಜಿಜ್ಞಾಂಸೆ ಮೂಡಿಸಿದ್ದು, ಜನತೆ ಹೈರಾಣಾಗಿದ್ದಾರೆ. ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿದ್ದ ವಿಷ್ಣು ತೀರ್ಥ ಎಂಬ ಅಧಿಕಾರಿ ರಾಯಬಾಗಕ್ಕೆ ವರ್ಗಾವಣೆ ಆಗಿದ್ದರು. ಅವರ ಜಾಗಕ್ಕೆ ಸರಕಾರದ ಆದೇಶ ಪತ್ರ ಹಿಡಿದು ಸದಾಶಿವ ಡಬ್ಬಗೋಳ ಎಂಬ ಅಧಿಕಾರಿ ಬಂದು ಆಸೀನರಾಗಿದ್ದಾರೆ.
ಇಬ್ಬರೂ ಅಧಿಕಾರಿಗಳು ಒಂದೇ ಜವಾಬ್ದಾರಿಯನ್ನು ಪ್ರತ್ಯೇಕ ಟೇಬಲ್ ಮೇಲೆ ಕುಳಿತು ನಡೆಸಿದ್ದಾರೆ.

ಇಬ್ಬರ ಹೇಳಿಕೆಗಳು ಸ್ವಸಮರ್ಥನೆಯಿಂದ ಕೂಡಿದ್ದು ಇಬ್ಬರಿಗೂ ಒಂದೇ ಚೇರ ಬೇಕಾಗಿದೆ. ಪ್ರಕರಣದಲ್ಲಿ ವಿಷ್ಣು ತೀರ್ಥ ಎಂಬುವವರು KAT ತಡೆಯಾಜ್ಞೆ ತಂದು ತಾನು ಅಧಿಕಾರದಲ್ಲಿ ಮುಂದುವರೆದಿದ್ದೇನೆ ಎನ್ನುತ್ತಾರೆ. ಆದರೆ ತಾನು ಸರಕಾರದ ಆದೇಶದ ಮೇರೆಗೆ ಬೆಳಗಾವಿ ತಾಲೂಕಿನ ಚಾರ್ಜ್ ತೆಗೆದುಕೊಂಡಿದ್ದೇನೆ ಎನ್ನುತ್ತಾರೆ. ಅಕ್ಟೋಬರ್ 30ರ ಸರಕಾರದ ಆದೇಶದಂತೆ ಮಾರನೆ ದಿನ 31ರಂದು ಅಧಿಕಾರ ಸ್ವೀಕರಿಸಿದ್ದಾಗಿ ಸದಾಶಿವ ಡಬ್ಬಗೋಳ ತಿಳಿಸುತ್ತಾರೆ. ಆದರೆ ವಿಷ್ಣು ತೀರ್ಥ ಪ್ರಕಾರ ತಾನು ಚಾರ್ಜ್ ಕೊಟ್ಟೆ ಇಲ್ಲ, ತಾನು ಕರ್ತವ್ಯದಿಂದ ಬಿಡುಗಡೆ ಸಹ ಹೊಂದಿಲ್ಲ. ತಾನು ರಜೆ ಮೇಲಿದ್ದಾಗ ಡಬ್ಬಗೋಳ ಕಚೇರಿಗೆ ಬಂದು ಕುಳಿತಿದ್ದಾರೆ ಎನ್ನುತ್ತಾರೆ. ಈ ಪ್ರಕರಣದಲ್ಲಿ ನ್ಯಾಯಾಲಯ ನ. 2ರಂದು ಸ್ಟೆಟಸ್ಕೊ ಆದೇಶ ನೀಡಿದ ಬಗ್ಗೆ ಇಬ್ಬರೂ ಅಧಿಕಾರಿಗಳೆ ಒಂದೇ ಪ್ರತಿ ತೋರಿಸುತ್ತಾರೆ. ಇಬ್ಬರೂ ಅಧಿಕಾರಿಗಳ ನಡುವಿನ ಕುರ್ಚಿ ತಿಕ್ಕಾಟದಲ್ಲಿ ಸಿಲುಕಿ ಜನ ಹೈರಾಣಾಗಿದ್ದಾರೆ. ರಜಿಸ್ಟ್ರೇಶನ್ ದಾಖಲೆಗಳಿಗೆ ಇಬ್ಬರೂ ಅಧಿಕಾರಿಗಳು ಸಹಿ ಮಾಡುತ್ತಿದ್ದಾರೆ ಎಂಬುವುದು ಗಮನಾರ್ಹ.

ಇಬ್ಬರಲ್ಲಿ ಯಾರು ಅಧಿಕೃತ: ಯಾರು ಹಿತವರು ಎಂಬ ಪ್ರಶ್ನೆ ಮೂಡಿದ್ದು ‘ಡೀಡ್ಸ್’ ಮಾಡಿಸಿಕೊಳ್ಳಲು ಇನ್ನಿಲ್ಲದ ಹೆದರಿಕೆ ಜನತೆಗೆ ಕಾಡುತ್ತಿದೆ. ಇಬ್ಬರೂ ಅಧಿಕಾರಿಗಳು ಕಾನೂನು ಸಂಘರ್ಷ ಕದನಕಿಳದಿದ್ದು, ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಅವಾಂತರ ವಿರೋಧಿಸಿ ಭ್ರಷ್ಟಾಚಾರ ನಿರ್ಮೂಲನಾ ಪರಿವಾರದ ಅಧ್ಯಕ್ಷ ಸುಜಿತ ಮುಳಗುಂದ ಮತ್ತು ಕಾರ್ಯಕರ್ತರು ಇಂದು ಪ್ರತಿಭಟನೆ ಸಹ ನಡೆಸಿದರು. ಜಿಲ್ಲಾಡಳಿತ ಮತ್ತು ಸರಕಾರ ತತಕ್ಷಣ ಗೊಂದಲಕ್ಕೆ ತೆರೆ ಎಳೆಯದಿದ್ದರೆ ಜನ ಸಂಕಷ್ಟಪಡಬೇಕಾಗುತ್ತದೆ ಎಂಬುವುದು ಗಮನ ಸೆಳೆಯಿತು.