SHARE

ವರದಿ:ಕಾಶೀಮ ಹಟ್ಟಿಹೊಳಿ

ಖಾನಾಪುರ: ಖಾನಾಪುರ ತಾಲೂಕಿನ ಹಲಸಿ ಗ್ರಾಮದ ಯೋಧ ಶ್ರೀ ಸತೀಶ ಕೃಷ್ಣ ಗುರವ (30), ಒರಿಸ್ಸಾ ರಾಜ್ಯದ ಗೋಪಾಲಪುರ Army Air Defence Acadamy ಯಲ್ಲಿ ಆಟ ಆಡುವಾಗ ತಲೆ ಸುತ್ತಿ ಬಿದ್ದಿದ್ದು, ಚಿಕಿತ್ಸೆ ಕುರಿತು ವಿಶಾಖಪಟ್ಟಣಂ Military Hospital ಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ Brain Hamarage ದಿಂದ
ಶನಿವಾರ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.

ಸತೀಶ ಕೃಷ್ಣ ಗುರವ 10 ವರ್ಷದ ಹಿಂದೆ ಸೇನೆಗೆ ಸೇರಿದ್ದು, Army Air Defence, ಅಂಬಾಲಾ, ಹರಿಯಾಣದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸತೀಶಗೆ 3 ವರ್ಷಗಳ ಹಿಂದೆ ಮದುವೆಯಾಗಿದ್ದು ಪ್ರೇಮಾನಂದ್ ಮತ್ತು ಸಾಗರ್ ಇಬ್ಬರು ಅಣ್ಣಂದಿರಿದ್ದಾರೆ. ಯೋಧನ ಪಾರ್ಥಿವ್ ಶರೀರವು ವಿಶಾಖಪಟ್ಟಣದಿಂದ ವಿಮಾನ ಮೂಲಕ ಗೋವಾಕ್ಕೆ ನಾಳೆ ಮುಂಜಾನೆ ಬಂದು, ಅಲ್ಲಿಂದ ರಸ್ತೆ ಮಾರ್ಗವಾಗಿ ಸ್ವಗ್ರಾಮಕ್ಕೆ ಬರುವುದಾಗಿ ತಿಳಿದು ಬಂದಿದೆ.