SHARE

ಬೆಳಗಾವಿ: ರಾಮದುರ್ಗ ತಾಲೂಕಿನ ಕೆ-ಚಂದರಗಿ ಗುದಗೋಪ್ಪ, ಕೇಸರಗೋಪ್ಪ, ಶಿದ್ನಾಳ, ತೋಟಗಟ್ಟಿ ಗ್ರಾಮಗಳಿಗೆ ಕುಡಿಯುವ ನೀರಿನ ಬೋರವೆಲಗಳು ಸ್ಥಗಿತಗೊಂಡಿವೆ ಎಂದು ಜಿಲ್ಲಾಧಿಕಾರಿ ಗಮನ ಸೆಳೆಯಲಾಯಿತು. ಗ್ರಾಮದ ಜನತೆ ಕುಡಿಯಲು ನೀರಿನ ಸಮಸ್ಯೆ ಅನುಮಭವಿಸುತ್ತಿದ್ದಾರೆ. ಆದ್ದರಿಂದ ಕೆ ಚಂದರಗಿ ಗ್ರಾಮದ ದೊಡ್ಡ ಕೆರೆ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿಗೆ‌ ಮನವಿ ಸಲ್ಲಿಸಿದರು.

ಗ್ರಾಮಗಳಲ್ಲಿ ಕಳೆದ ಹತ್ತು ವರ್ಷಗಳಿಂದ‌ ಕುಡಿಯುವ ನೀರಿನ ಸಮಸ್ಯೆ ಇದೆ. ಜಾನುವಾರಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ರಾಮಲಿಂಗೇಶ್ವರ ಏತ ನೀರಾವರಿ ಯೋಜನೆಯ ನೀರಿನಿಂದ ಕೆರೆ ತುಂಬಿಸುವ‌ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಪ್ರಾಣಿಗಳಿಗೆ ಜನರಿಗೆ ಆಗುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನಿಗಿಸಬಹುದು ಎಂದು ಮನವಿಯಲ್ಲಿ ಒತ್ತಾಯಸಿದ್ದಾರೆ. ಲೋಕಸಭಾ ಚುನಾವಣೆ ಒಳಗಾಗಿ ಕೆ.ಚಂದರಗಿ ಗ್ರಾಮದ‌ ದೊಡ್ಡ ಕೆರೆಗೆ ನೀರು ತುಂಬಿಸದಿದ್ದರೆ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಜಿಪಂ. ಸದಸ್ಯ ಹಾಗೂ ನ್ಯಾಯವಾದಿ ರಮೇಶ ದೇಶಪಾಂಡೆ ತಿಳಿಸಿದ್ದಾರೆ.