SHARE

ಮುಂಬೈ: ಆರ್​ಬಿಐ ಗವರ್ನರ್ ಉರ್ಜಿತ್​ ಪಟೇಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಎನ್ ಪಿಎ ಹಾಗೂ ಆರ್ ಬಿಐ ಸೆಕ್ಷನ್ 7 ರ ಸಂಬಂಧ ಕಳೆದ ಕೆಲವು ದಿನಗಳಿಂದ ಆರ್ ಬಿಐ ಹಾಗೂ ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ನಡೆದಿತ್ತು. ಇದೀಗ ಉರ್ಜಿತ್​ ಪಟೇಲ್ ರಾಜೀನಾಮೆಯಿಂದ ತಿಕ್ಕಾಟ ಅಂತ್ಯವಾಗಿದೆ.

ಗುಜರಾತ್​ ಮೂಲದವರಾಗಿದ್ದ ಉರ್ಜಿತ್ ಪಟೇಲ್​ ಅವರನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಮುತುವರ್ಜಿ ವಹಿಸಿ, ಆರ್​ಬಿಐ ಗವರ್ನರ್ ಸ್ಥಾನಕ್ಕೆ ನೇಮಿಸಿದ್ದರು. ಆದರೆ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿರುವುದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಇದು ತೀವ್ರ ಮುಖಭಂಗವಾದಂತಾಗಿದೆ.