SHARE

ಬೆಳಗಾವಿ: ಪಂಚರಾಜ್ಯ ಚುನಾವಣೆ ರಾಜ್ಯದಲ್ಲಿ ಕಾಂಗ್ರೆಸ್ ಗೆ ವರದಾನವಾಗಿ ಶಕ್ತಿ ವೃದ್ದಿಯಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ತಿಳಿಸಿದ್ದಾರೆ. ಪರಿಷತ್ ಪ್ರಾರಂಭಕ್ಕೆ ಮುನ್ನ ಮಾಧ್ಯಮಗಳಿಗೆ ಮಾತನಾಡಿದ ಡಿಸಿಎಂ ಡಾ. ಜಿ. ಪರಮೇಶ್ವರ ಹಾಗೂ ದಿನೇಶ ಗುಂಡೂರಾವ್ ಫಲಿತಾಂಶಕ್ಕೆ ಕಾಯುತ್ತಿದ್ದೇವೆ. ಪಂಚರಾಜ್ಯಗಳ ಚುನಾವಣೆ ನಮಗೆ ಶಕ್ತಿ ಕೊಡಲಿದೆ ಹೊರತು ಯಾವುದೇ ಪರಿಣಾಮ ಬೀರದು ಎಂದು ಇಬ್ಬರೂ ನಾಯಕರು ಸ್ಪಷ್ಟಪಡಿಸಿದರು. ರಾಜಕೀಯವಾಗಿ ಕಾಂಗ್ರೆಸ್ ಗೆ ಬಲಿಷ್ಠಗೊಳ್ಳುವ ಕಾಲ ನಮ್ಮದಾಗಿ ಬಂದಿದೆ ಎಂದರು.