SHARE

ಬೆಳಗಾವಿ: ರಾಷ್ಟ್ರೀಕೃತ ಬ್ಯಾಂಕಗಳ ರೈತರ ಸಾಲಮನ್ನಾ ವಿಷಯದಲ್ಲಿ ಉತ್ತರ ನೀಡುತ್ತಿದ್ದ ಸಿಎಂ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ನಡುವೆ ವೈಯಕ್ತಿಕ ವಾಗ್ವಾದ ನಡೆದು ಸದನದಲ್ಲಿ ಭಾರಿ ಗದ್ದಲ ಉಂಟಾಯಿತು. ರಾಷ್ಟ್ರೀಕೃತ ಬ್ಯಾಂಕಗಳು ಕೇಳದಿದ್ರೆ ನಾನೇ ಹಣ ತುಂಬ್ತೀನಿ ಬಿಡ್ರೀ ಎಂದು ಏರುಧ್ವನಿಯಲ್ಲಿ ಎಚ್. ಡಿ. ಕುಮಾರಸ್ವಾಮಿ ಉತ್ತರಿಸುತ್ತಿದ್ದಾಗ, ಯಡಿಯೂರಪ್ಪ ಮಧ್ಯಪ್ರವೇಶಿಸಿ 6ತಿಂಗಳಿಂದ ಏನ ಮಾಡಿದ್ರಿ ಎಂದು ಪ್ರಶ್ನಿಸಿದಾಗ ಏರುಧ್ವನಿಯಲ್ಲಿ ವಾಗ್ವಾದ ವಿನಿಮಯವಾಯಿತು. ಬಿಜೆಪಿ ಎಲ್ಲ ಶಾಸಕರು ಸದನದ ಬಾವಿಗೆ ಇಳಿದು ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದಾಗ ಸ್ಪೀಕರ್ ರಮೇಶಕುಮಾರ ಸದನವನ್ನು 20 ನಿಮಿಷ ಮುಂದೂಡಿದರು.