SHARE

ಬೆಳಗಾವಿ: ರಾಜ್ಯದ ಇತಿಹಾಸದಲ್ಲಿ ಧಿಮಾಕಿನ ಮಾತುಗಳ ಮೂಲಕ ಪ್ರತಿಪಕ್ಷಗಳನ್ನು ಹೆದರಿಸುವ ಯತ್ನ ಸಿಎಂ ಕುಮಾರಸ್ವಾಮಿ ಮಾಡಿದ್ದು, ಬಿಜೆಪಿ ಇದಕ್ಕೆ ಹೆದರೊಲ್ಲ ಎಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಗುಡುಗಿದ್ದಾರೆ. ಸದನದಲ್ಲಿ ನಡೆದ ಗದ್ದಲ ಮತ್ತು ಕಲಾಪ ಮುಂದೂಡಿಕೆ ನಂತರ ಮಾಧ್ಯಮ ಗೋಷ್ಠಿಯಲ್ಲಿ ಬಿಎಸ್ವೈ ಮತ್ತು ನಾಯಕರು ಮಾತನಾಡಿದರು.

ಸೊಕ್ಕಿನ ಹಾಗೂ ಧಿಮಾಕಿನ ಮಾತು ಆಡಿ ಪ್ರತಿಪಕ್ಷ ಸದಸ್ಯರನ್ನು ಸದನದಲ್ಲಿ ಅವಮಾನ ಮಾಡಿದ್ದಾರೆ. ಅಂತೆ ಕಂತೆಯ ಎರಡು ತಾಸು ಭಾಷಣ ಸಿಎಂ ಹೊಡೆದರು. 377ರೈತರ ಆತ್ಮಹತ್ಯೆಯೇ ಈ ಸರಕಾರದ ಸಾಧನೆ ಹೊರತು ಮತ್ತೇನಿಲ್ಲ. ಸ್ವ ಪ್ರಚೋದನೆಗೆ ಒಳಗಾಗಿ ದುರಹಂಕಾರದ ಮಾತಾಡಿ ಸಿಎಂ ಹೋಗಿದ್ದಾರೆ. ಕೇವಲ ₹50 ಕೋಟಿ ಮಾತ್ರ ಸಾಲಮನ್ನಾ ಇಲ್ಲಿಯವರೆಗೆ ಮಾಡಿದ್ದಾರೆ. ಬರಗಾಲದ ಬಗ್ಗೆ ನಿರ್ಧಿಷ್ಟ ಸ್ಪಷ್ಟ ಉತ್ತರ ಸರಕಾರದ ಬಳಿ ಇಲ್ಲ. ಸರಕಾರ ಬ್ಯಾಂಕಗಳ ಮೇಲೆ ಹರಿಹಾಯುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ತೋರಿಸಲು ಕೇಂದ್ರ ಸರಕಾರ ಮತ್ತು ಬ್ಯಾಂಕಗಳ ದೂಷಣೆ ಮಾಡುತ್ತಿದ್ದಾರೆ. ಪ್ರತಿಪಕ್ಷವನ್ನು ಬೆದರಿಸುವ ತಂತ್ರ ಸಿಎಂ ಮಾಡಿದ್ದಾರೆ. ಅಧಿಕಾರದ ಮದದಿಂದ ಪ್ರತಿಪಕ್ಷವನ್ನು ಧಿಮಾಕಿನ ಮಾತಿನಿಂದ ಬೆದರಿಸುವುದು ತರವಲ್ಲ ಎಂದು ಬಿ. ಎಸ್. ಯಡಿಯೂರಪ್ಪ ತಿಳಿಸಿದರು. ಪ್ರತಿಪಕ್ಷದ ನಾಯಕರ ಬಗ್ಗೆ ಹಗುರವಾಗಿ ಸಿಎಂ ಮಾತನಾಡಿ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ತಿಳಿಸಿ ಪ್ರತಿಪಕ್ಷದ ಕ್ಷಮೆ ಕೇಳಲು ಶೆಟ್ಟರ ಆಗ್ರಹಿಸಿದರು. ಕೆ. ಎಸ್. ಈಶ್ವರಪ್ಪ, ಆರ್. ಅಶೋಕ, ಎಂ. ಬಿ. ಪಾಟೀಲ ಹಾಗೂ ಇತರ ನಾಯಕರು ಹಾಜರಿದ್ದರು.