SHARE

ಬೆಳಗಾವಿ:ನಾನು ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ತಾಜ್ ವೆಸ್ಟೆಂಡನಲ್ಲಿ ಇದ್ದಿದ್ದೆ ನಿಜವೆಂದು ಸಾಬೀತುಪಡಿಸಿದರೆ ಮುಂದಿನ 24ಗಂಟೆಯಲ್ಲಿ ನನ್ನ ಶಾಸಕತ್ವಕ್ಕೆ ರಾಜೀನಾಮೆ ಕೊಡುವೆ ಎಂದು ಬಿಎಸ್ವೈ ವಿಧಾನಸಭೆಯಲ್ಲಿ ಗುಡುಗಿದರು.

…ಜವಾಬ್ದಾರಿಯಿಂದ ಇರಬೇಕಲ್ವ ರೇವಣ್ಣ.‌.. ಹೇಳು ನಿಮ್ಮ ತಮ್ಮನಿಗೆ… ಎಂದು ಯಡಿಯೂರಪ್ಪ ಸಿಎಂ ಕುಮಾರಸ್ವಾಮಿ ಅವರಿಗೆ ನೇರವಾಗಿ ಗುಡುಗಿದರು. ಮಧ್ಯಪ್ರವೇಶಿಸಿದ ಸಚಿವ ಎಚ್. ಡಿ. ರೇವಣ್ಣ ನಾನೇನು… ಫೈವ್ ಸ್ಟಾರ್ ಗೀರ್… ಇಲ್ಲಪ್ಪ ಎನ್ನುತ್ತಿದ್ದಂತೆ, ಬಿಡಪ್ಪ ಹಂಡ್ರೆಡ್ ಸ್ಟಾರ್ ನೀನು ಎಂದು ಚಟಾಕೆ ಹಾರಿಸಿದರು.

ಸಿಎಂ ಸ್ಥಾನ ಬೇಡ: ನಾನು ತಾಜ್ ವೆಸ್ಟೆಂಡ್ ರೂಮು ಖಾಸಗಿ ಖರ್ಚಿನಲ್ಲಿ ಪಡೆದಿದ್ದೇನೆ ಹೊರತು ಸರಕಾರಿ ಸವಲತ್ತಿನಲ್ಲಿ ಅಲ್ಲ. ನಾನು ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದೇನೆ ಎಂದು ನೀವು ಸಾಬೀತುಪಡಿಸಿದರೆ ನಾನೂ ಸಹ ಈ ಸ್ಥಾನದಲ್ಲಿ ಇರಲ್ಲ ಅಧ್ಯಕ್ಷರೆ ಎಂದು ಮರು ಸವಾಲು ಹಾಕಿದರು. ಬಡವರ ಅರ್ಜಿಗಳು ನಮ್ಮ ಸರಕಾರದಲ್ಲಿ ಇತ್ಯರ್ಥವಾಗುತ್ತಿವೆ. ಆಡಳಿತ ಚುರುಕಿನಿಂದ ಇದೆ, ಬಡವರ ಬಗ್ಗೆ ಸ್ವತಃ ಗಮನ ಹರಿಸಿ ಕೆಲಸ ಮಾಡುತ್ತಿದ್ದೇನೆ ಎಂದು ಕೆಲವು ಕೆಲಸಗಳನ್ನು ಉಲ್ಲೇಖಿಸಿದರು.

ಅವಳು ತಾಯಿ: ಬೆಳಗಾವಿ ರೈತ ಹೆಣ್ಮಗಳಿಗೆ ನಾನು ತಾಯಿ ಎಂದು ಸಂಭೋದಿಸಿದ್ದೇನೆ ಹೊರತು ಕೆಟ್ಟದಾಗಿ ಮಾತಾಡಿಲ್ಲ. ಆದರೆ ನನ್ನ ಮಾತನ್ನು ಅಪಾರ್ಥ ಕಲ್ಪಿಸಿ ಏನೆನೊ ಹಬ್ಬಿಸಿದರು. ಯಾರದೇ ನಡವಳಿಕೆ ಬಗ್ಗೆ ನಾನು ಮಾತಾಡುವವನು ಅಲ್ಲ. ರೈತ ಹೋರಾಟಗಾರರನ್ನು ಹತ್ತಿಕ್ಕುವವನೂ ನಾನಲ್ಲ. ರೈತ ಉಳಿಯಬೇಕು ಎಂದು ಪ್ರತಿಪಾದಿಸಿದರು. ತಾಯಿ ಇಷ್ಟು ದಿವಸ ನಿದ್ದೆ ಮಾಡ್ತಿದ್ದಿಯಾ ಎನ್ನುವ ನನ್ನ ಆಡು ಭಾಷೆಯನ್ನೇ ಬೇಕಂದಷ್ಟು ಎಳೆದೆಳೆದು ಗದ್ದಲ ಎಬ್ಬಿಸಬಾರದು ಎಂದು ಮನವಿ ಮಾಡಿದರು.