SHARE

ಬೆಳಗಾವಿ: ಇಂದು ಅಧಿವೇಶನದ ಕೊನೆಯ ದಿನ ಶುಕ್ರವಾರವೂ ಕೆಳಮನೆಯಲ್ಲಿ ಬಿಜೆಪಿ ಸದನದ ಬಾವಿಗಿಳಿದು ಸರಕಾರದ ವಿರುದ್ಧ ಘೋಷಣೆ ಕೂಗಿದರು. ಈ ಮಧ್ಯಯೇ ಸಂಸದೀಯ ಸಚಿವ ಕೃಷ್ಣಬೈರೇಗೌಡ ವಿಧೇಯಕಗಳನ್ನು ಮಂಡಿಸಿ ಸ್ಪೀಕರ್ ರಮೇಶಕುಮಾರ ಮೂಲಕ ಸದನದ ಅನುಮೋದನೆ ಪಡೆದುಕೊಂಡರು. 2018ನೇ ಸಾಲಿನ ರೈ ತಾಂತ್ರಿಕ ವಿವಿ ತಿದ್ದುಪಡಿ ವಿಧೇಯಕ, 2018ನೇ ಸಾಲಿನ ಅನರ್ಹತಾ ನಿವಾರಣಾ ತಿದ್ದುಪಡಿ ವಿಧೇಯಕ, ಸಿವಿಲ್ ಸೇವೆಗಳ ಕಾರ್ಯವಿಧಾನ ವಿಧೇಯಕ, ವಿಧಾನಮಂಡಲ ಅನರ್ಹತಾ ನಿವಾರಣಾ ಕಾಯ್ದೆ, ರಾಜೀವ ಗಾಂಧಿ ವಿವು ತಿದ್ದುಪಡಿ ವಿಧೇಯಕಗಳು ಪ್ರತಿಪಕ್ಷದ ಮೇರೆ ಮೀರಿದ ಗದ್ದಲ ಘೋಷಣೆ ನಡುವೆ ಕೆಳಮನೆಯಲ್ಲಿ ಅಂಗೀಕಾರಗೊಂಡವು. ಕೆಳಮನೆ ಸರಿಯಾಗಿ 11:30ಕ್ಕೆ ಮುಕ್ತಾಯಗೊಂಡರೆ, ಮೇಲ್ಮನೆಯಲ್ಲೂ ಗದ್ದಲವಾಗಿ ಸರಿಯಾಗಿ 12:30ಕ್ಕೆ ಮುಂದೂಡಲ್ಪಟ್ಟು ಬೆಳಗಾವಿ ಅಧಿವೇಶನ ಸಮಾಪ್ತಿ ಆಯಿತು.