SHARE

ಬೆಳಗಾವಿ: ಕಿತ್ತೂರು ಹಾಗೂ ಎಂ.ಕೆ. ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಹಾಗೂ ಕೆಲಸಗಾರರು ಬಾಕಿ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುದರು. ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗೂ ಎಂ.ಕೆ. ಹುಬ್ಬಳ್ಳಿ ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ ಏರಿದ ನಂತರ ಇಲ್ಲಿ ಪೌರಕರ್ಮಿಕರಾಗಿ, ಕೆಲಸಗಾರರಾಗಿ ಕೆಲಸಕ್ಕೆ ಸೇರಿದ ಸುಮಾರು 50 ಜನಕ್ಕೆ ಕಳೆದ 10 ತಿಂಗಳಿಂದ ವೇತನವವಿಲ್ಲದೆ ಪರದಾಡುವಂತಾಗಿದೆ. ಇವರಿಗೆ ದಿನ ನಿತ್ಯ ಕುಟುಂಬ ನಿರ್ವಹಣೆಗೆ ಭಾರಿ ತೊಂದರೆ ಆಗುತ್ತಿದ್ದು ಪದೇ ಪದೇ ಸರ್ಕಾರಕ್ಕೆ ಗಮನಕ್ಕೆ ತೆಗೆದುಕೊಂಡು ಬಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಕರ್ನಾಟಕ ಯುವ ಜಾಗೃತಿ ವೇದಿಕೆ ಪ್ರದಾನ ಕಾರ್ಯದರ್ಶಿ ಬಸವರಾಜು ಹಾಗೂ ಸಂಚಾಲಕರಾದ ಸುನಿಲ್ ಸಂಬಣ್ಣನವರ್ ಬೆಂಬಲ ಸೂಚಿಸಿದರು.