SHARE

ಬೆಂಗಳೂರು/ ಬೆಳಗಾವಿ: ಡಿಸೆಂಬರ್ 22 ರಂದು ಸಚಿವ ಸಂಪುಟ ಪುನಾರಚನೆ ಮಾಡಿದ್ದ ಜೆಡಿಎಸ್​-ಕಾಂಗ್ರೆಸ್​ ದೋಸ್ತಿ ಸರ್ಕಾರ, ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ ಇಂದು ಮಾಡಿದೆ. ಸಂಪುಟ ಪುನಾರಚನೆ ಬೆನ್ನಲ್ಲೇ ಪ್ರಭಾವಿ ಖಾತೆಗಳಿಗಾಗಿ ನೂತನ ಸಚಿವರು ಪಟ್ಟು ಹಿಡಿದಿದ್ದರು. ಆದರೆ ಎರಡು, ಮೂರು ಖಾತೆಗಳನ್ನ ನಿಭಾಯಿಸುತ್ತಿದ್ದ ಕೆಲ ಸಚಿವರು ತಮ್ಮ ಖಾತೆಗಳನ್ನ ಬಿಟ್ಟುಕೊಡಲು ನಿರಾಕರಿಸಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ವೇಣುಗೋಪಾಲ್​ ಅವರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಕೊನೆಗೂ ಸಚಿವರ ಮನವೊಲಿಸಿ ಕೆಲವು ಖಾತೆಗಳನ್ನ ವಾಪಸ್ ಪಡೆದು ನೂತನ ಸಚಿವರಿಗೆ ಯಾವ್ಯಾವ ಖಾತೆ ಅಂತಾ ಪಟ್ಟಿ ಸಿದ್ಧಮಾಡಿದ್ದರು. ಖಾತೆ ಹಂಚಿಕೆ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ.

1. ಎಂ.ಬಿ. ಪಾಟೀಲ್​ -ಗೃಹ ಖಾತೆ
2. ಸತೀಶ್​ ಜಾರಕಿಹೊಳಿ -ಅರಣ್ಯ ಖಾತೆ
3. ಎಂಟಿಬಿ ನಾಗರಾಜು -ವಸತಿ ಖಾತೆ
4. ರಹೀಂ ಖಾನ್ -​ಯುವಜನ ಸೇವೆ ಮತ್ತು ಕ್ರೀಡೆ
5. ಆರ್. ಬಿ. ತಿಮ್ಮಾಪುರ -ಕೌಶಲ್ಯಾಭಿವೃದ್ಧಿ ಇಲಾಖೆ
6. ಪಿ.ಟಿ. ಪರಮೇಶ್ವರ್​ ನಾಯ್ಕ್​ -ಮುಜರಾಯಿ, ಐಟಿ-ಬಿಟಿ
7. ಇ. ತುಕಾರಾಂ -ವೈದ್ಯಕೀಯ ಶಿಕ್ಷಣ ಖಾತೆ
8. ಸಿ.ಎಸ್. ಶಿವಳ್ಳಿ -​ಪೌರಾಡಳಿತ, ಬಂದರು ಖಾತೆ