SHARE

ಬೆಳಗಾವಿ: ದೇಶದ ಚುನಾವಣಾ ಆಯುಕ್ತ ಅಶೋಕ ಲಾವಸಾ ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ಅಗತ್ಯ ಸಿದ್ದತೆಗಳು ಹಾಗೂ ಪರಿಷ್ಕರಣೆಗೆ ಸಂಬಂಧಿಸಿದ ಪರಿಶೀಲನಾ ಸಭೆ ಬೆಳಗಾವಿಯಲ್ಲಿ ನಡೆಸಿದರು. ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ, ಪ್ರಾದೇಶಿಕ ಆಯುಕ್ತ ಪಿ. ಎ. ಮೇಘನ್ನವರ, ವಿಭಾಗೀಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಭಾಗವಹಿಸಿದರು.ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ ಆಯುಕ್ತರಿಗೆ ವರದಿ ನೀಡಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಕ್ಷ ಕಾರ್ಯನಿರ್ವಹಣೆ ಮಾಡಿದ 14ಅಧಿಕಾರಿಗಳನ್ನು ದೇಶದ ಚುನಾವಣಾ ಆಯುಕ್ತರು ಸನ್ಮಾನಿಸಿದರು. ಈ ಹಿಂದೆ ಬೆಳಗಾವಿ ಎಡಿಸಿ ಆಗಿ ಕಾರ್ಯನಿರ್ವಹಿಸಿ, ಈಗ ಕಾರವಾರ ಎಡಿಸಿ ಆಗಿರುವ ಡಾ. ಸುರೇಶ ಇಟ್ನಾಳ ಆಯುಕ್ತರಿಂದ ಅಭಿನಂದನೆ ಸ್ವೀಕರಿಸಿದರು.