SHARE

ಬೆಳಗಾವಿ: 2007 ರಲ್ಲಿ ಬೆಳಕಿಗೆ ಹಷೀಷ್ ಪ್ರಕರಣದ ಆರೋಪಿ ಆಕಾಶ ಬಾಲಚಂದ್ರ ದೇಸಾಯಿ ಸೇರಿ ನಾಲ್ವರು ಇತರ ಆರೋಪಿಗಳಿಗೆ 10ವರ್ಷ ಕಠಿಣ ಸಜೆ ಹಾಗೂ ತಲಾ ₹೪ಲಕ್ಷ ದಂಡ ವಿಧಿಸಿ 2ನೇ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದೆ.

ಮರ್ಸಿಡಿಸ್ ಕಾರಿನಲ್ಲಿ ಅಂದು ಅಕ್ರಮವಾಗಿ ಶಹಾಪುರದ ಆಕಾಶ ದೇಸಾಯಿ ಹಾಗೂ ಆಸೀಫ್ ಅಬ್ದುಲ್ ಮುನಾಫ್ ಬುರಾನವಾಲೆ ಎಂಬುವವರು 5ಕೆಜಿ ಹಶೀಷ್ ಮಾದಕವಸ್ತು ನೆರೆಯ ಗೋವಾಕ್ಕೆ ರವಾಣೆ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಜತೆಗೆ ಟಿಳಕವಾಡಿ ಪೊಲೀಸರು ಗೋವಾವೆಸ್ ವೃತ್ತದಲ್ಲಿ ಕಾರಿನ ಏರಬ್ಯಾಗ್ ತಪಾಸಣೆ ಮಾಡಿದಾಗ 5ಕೆಜಿ ಹಶೀಷ್ ಹಾಗೂ ಲೊಡೇಡ್ ಗನ್ ಸಿಕ್ಕಿತ್ತು. ಜತೆಗೆ ೧೦ಜೀವಂತ ಗುಂಡುಗಳು ಮತ್ತು 1ಲಕ್ಷ 10ಸಾವಿರ ಹಣ ಸಿಕ್ಕಿತ್ತು. ಜತೆಗೆ ಎರಡನೇ ಆರೋಪಿ ಆಸೀಫ್ ಬುರಾನೆವಾಲೆ ಬ್ಯಾಗನಲ್ಲಿ ಪೊಟೊಪ್ರೇಮಗಳಲ್ಲಿ ಮತ್ತು ಪ್ಲಾಸ್ಟಿಕ್ ಕವರಗಳಲ್ಲಿ ಒಟ್ಟು 3ಕೆಜಿ ಹಶೀಷ್, ಎರಡು ಮೊಬೈಲ್, 35ಸಾವಿರ ಹಣ ಸಿಕ್ಕಿತ್ತು. ಪ್ರಕರಣದಲ್ಲಿ ಆಕಾಶ ದೇಸಾಯಿ ಚನ್ನಮ್ಮ ನಗರದ ಬಾಡಿಗೆ ಮನೆಯಲ್ಲಿ ತಪಾಸಣೆ ಮಾಡಿದಾಗ ತಾನು ಅಕ್ರಮ ಹಶೀಷ್ ದಂಧೆ ಮಾಡುತ್ತಿರುವ ಬಗ್ಗೆ ಪೊಲೀಸರ ಎದುರು ಒಪ್ಪಿಕೊಂಡಿದ್ದ. ಇದಾದ ನಂತರ ಮೂರನೇ ಆರೋಪಿ ಮೊಹಮ್ಮದ್ ಅಲಿ ಸೈಯ್ಯದ್ ಮನೆಯಲ್ಲಿ 2ಕೆಜಿ ಹಶೀಷ್ ದೊರೆತಿತ್ತು. ನಾಲ್ಕನೇ ಆರೋಪಿ ಸಜ್ಜನ ಹೆರವಲಕರ ಬಳಿ 6.838ಗ್ರಾಂ ಹಶೀಷ್ ಮಾದಕ ವಸ್ತು ದೊರೆತಿತ್ತು. ಹಶೀಷ್ ಅನ್ನು ದೇಶ ವಿದೇಶಗಳಲ್ಲಿ ಮಾರಾಟ ಮಾಡುವ ದಂಧೆ ಇವರಿಂದ ತಿಳಿದುಬಂದಿತ್ತು. ಟಿಳಕವಾಡಿ ಪೊಲೀಸರು ಅಪರಾಧ ಸಂಖ್ಯೆ: 85/07 ರಲ್ಲಿ ಕಲಂ 20,21,22 ಎನ್ ಡಿಪಿಎಸ್ ಕಾಯ್ದೆ 1985 ಮತ್ತು 3,5,7,25(ಎ), 27,29 ರ ಆರ್ಮ್ಸ್ ಕಾಯ್ದೆ ಮತ್ತು ಭಾರತ ದಂಡ ಸಂಹಿತೆ ಕಲಂ 489 ಅಡಿ ಪ್ರಕರಣ ದಾಖಲಿಸಿಕೊಂಡರು. ಕೋರಿಯರ್ ಮೂಲಕ ವಿದೇಶಗಳಿಗೆ ಮಾದಕ ವಸ್ತುಗಳನ್ನು ಸಪ್ಲೈ ಮಾಡುತ್ತಿದ್ದ ಎನ್ನಲಾಗಿದೆ. ಜಿಲ್ಲಾ ಸತ್ರ ನ್ಯಾಯಾಧೀಶ ಎಂ. ಎಚ್. ಅನ್ನಯ್ಯನವರ ತೀರ್ಪು ಹೊರಡಿಸಿದ್ದು, ಸರಕಾರಿ ಅಭಿಯೋಜಕ ಜಿ. ಕೆ. ಮಾಹುರಕರ ಸಮರ್ಥ ವಾದ ಮಂಡಿಸಿದ್ದರು. ಪ್ರಕರಣದಲ್ಲಿ 49ಜನ ಸಾಕ್ಷಿ ನುಡಿದು, 231ನಿಶಾನೆ ತಪಾಸಿಸಿ 92 ಮುದ್ದೆಮಾಲು ಗುರುತಿಸಲಾಗಿತ್ತು.