SHARE

ಬೆಳಗಾವಿ:ಬೆಳಗಾವಿ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿ ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ತಾತ್ಕಾಲಿಕ ಅಧಿಕಾರ ಹೊಸ ವರ್ಷದ ಮೊದಲ ದಿನ ಇಂದು ವಹಿಸಿಕೊಂಡರು. ಎಡಿಸಿ ಡಾ. ಎಚ್. ಬಿ. ಬೂದೆಪ್ಪ ಅವರು ದೀರ್ಘ ರಜೆ ಪಡೆದ ಹಿನ್ನೆಲೆಯಲ್ಲಿ ಹೆಚ್ಚುವರಿ ಹೊಣೆಗಾರಿಕೆ ಶಶಿಧರ ಕುರೇರ ಅವರಿಗೆ ನೀಡಲಾಗಿದೆ. ಎಡಿಸಿ ಡಾ. ಎಚ್. ಬಿ. ಬೂದೆಪ್ಪ ಮರಳಿ ಆಗಮಿಸುವವರೆಗೆ ಶಶಿಧರ ಕುರೇರ ಎಡಿಸಿ ಆಗಿ ಕಾರ್ಯ ನಿರ್ವಹಿಸಲಿದ್ದು, ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಎಂಡಿ ಕೆಲಸವೂ ಅವರ ಹೆಗಲಿಗಿರಲಿದೆ.