SHARE

ಬೆಳಗಾವಿ: ನಗರದ 3ನೇ ರೈಲ್ವೇ ಗೇಟ್ ನೂತನ ಓವರ್ ಬ್ರಿಡ್ಜ್ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು. ಲೆವೆಲ್ ಕ್ರಾಸ್ 381ರ ಬದಲಾಗಿ ಈ ನೂತನ ಮೇಲ್ಸೆತುವೆ ಕಾಮಗಾರಿಗೆ ಸಂಸದ ಸುರೇಶ ಅಂಗಡಿ ಚಾಲನೆ ನೀಡಿದರು. ಸಚಿವ ಸತೀಶ್ ಜಾರಕಿಹೊಳಿ, ನೈರುತ್ಯ ರೈಲ್ವೆ ಜನರಲ್ ಮ್ಯಾನೆಜರ್ ಅಜಯಕುಮಾರ ಸಿಂಗ್, ಹುಬ್ಬಳ್ಳಿ ಡಿವಿಶನಲ್ ಮ್ಯಾನೇಜರ್ ರಾಜೇಶ ಮೋಹನ, ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಜಿಪಂ. ಅಧ್ಯಕ್ಷೆ ಆಶಾ ಐಹೊಳೆ, ಉಪಮೇಯರ್ ಮಧುಶ್ರೀ ಪೂಜಾರಿ, ಪಾಲಿಕೆ ಆಯುಕ್ತ ಹಾಗೂ ಎಡಿಸಿ ಶಶಿಧರ ಕುರೇರ ಇತರರು ಭಾಗವಹಿಸಿದರು.