SHARE

ಬೆಳಗಾವಿ: ಭಾರತ ಬಂದ್ ಎರಡನೇ ದಿನವಾದ ಬುಧವಾರ ಯಾವುದೇ ಬಂದ್ ಸೂಚನೆ ಕಾಣದೇ ಸಹಜ ಸರಕಾರಿ ಬಸ್ ಸೇವೆ ಬೆಳಿಗ್ಗೆಯಿಂದಲೇ ಪ್ರಾರಂಭವಾಯಿತು. ಕೇಂದ್ರ ಬಸ್ ನಿಲ್ದಾಣ ಹಾಗೂ ನಗರ ಸಾರಿಗೆ(CBT) ಬಸಗಳು ಎಂದಿನಂತೆ ಇಂದು ಪ್ರಾರಂಭವಾದವು.ಕಾರ್ಮಿಕ ಸಂಘಟನೆಗಳು ಎರಡು ದಿನ ಬಂದ್ ಆಚರಣೆ ಕರೆ ಕೊಟ್ಟರೂ ಸಹ ಇಂದು ಯಾವುದೇ ಬಂದ್ ಆಗಲಿಲ್ಲ. ಮಂಗಳವಾರ ಸಂಪೂರ್ಣ ಸರಕಾರಿ ಬಸ್ ಸಂಚಾರ ಸ್ಥಗಿತವಾಗಿ ಬೆಳಗಾವಿ ವಿಭಾಗ ₹67ಲಕ್ಷ ಹಾಗೂ ಚಿಕ್ಕೋಡಿ ವಿಭಾಗ ₹50ಲಕ್ಷ ಹಾನಿ ಅನುಭವಿಸಿದ್ದ ಸಾರಿಗೆ ಇಲಾಖೆಗೆ ಇಂದು ನಿರಾಳತೆ ಸಿಕ್ಕಿದೆ. ಬೆಳಗಾವಿಯಿಂದ ಬೆಳಿಗ್ಗೆ 5:30ರಿಂದಲೇ ಮಹಾರಾಷ್ಟ್ರ, ಗೋವಾ, ಹುಬ್ಬಳ್ಳಿ -ಧಾರವಾಡನತ್ತ ಬಸ್ ಗಳು ಸಂಚರಿಸಿದವು. ಆಟೊ ಹಾಗೂ ಗೂಡ್ಸ್ ಸೇವೆ ಆರಂಭವಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚರಿಸಿದರು. ಸಾರಿಗೆ ಅಧಿಕಾರಿಗಳು, ಪೊಲೀಸರು ಬಸ್ ನಿಲ್ದಾಣದಲ್ಲಿ ಬೀಡುಬಿಟ್ಟರು.