SHARE

ಖಾನಾಪುರ: ಕರ್ನಾಟಕ ಸರ್ಕಾರದ ಸಂಸದೀಯ ಕಾರ್ಯದರ್ಶಿ ಹಾಗೂ ಖಾನಾಪೂರ ವಿಧಾನಸಭಾ ಕ್ಷೇತ್ರದ ಶಾಸಕಿಯಾದ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ರವರು ಖಾನಾಪೂರ ತಾಲೂಕಿನ ಘೋಟಗಾಳಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಾ ಗಾಂಧೀ ನರೇಗಾ ಯೋಜನೆಯಡಿ ಘೋಟಗಾಳಿ ಗ್ರಾಮದಲ್ಲಿ “ರಾಜೀವ್ ಗಾಂಧಿ ಸೇವಾ ಕೇಂದ್ರ” ಹಾಗೂ ಅಂಗನವಾಡಿ ಕಟ್ಟಡ ನಿರ್ಮಾಣ, ಶಿಂಧೊಳ್ಳಿ ಕೆ.ಹೆಚ್. ಗ್ರಾಮದಲ್ಲಿ ಕುಡಿಯುವ ನೀರಿನ ಬಾವಿ ನಿರ್ಮಾಣ, ಘೋಟಗಾಳಿ-ಶಿವಠಾಣಾ ರಸ್ತೆಯಲ್ಲಿರುವ ನಾಲೆಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಹಾಗೂ ಶಾಸಕರ ನಿಧಿಯಿಂದ ಶಿಂಧೊಳಿ ಬಿ.ಕೆ.ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು,ಈಗಾಗಲೇ ಇದೇ ಮಹಾತ್ಮಾಗಾಂಧಿ ಮನರೇಗಾ ಯೋಜನೆಯಡಿ ಘೋಟಗಾಳಿ ಗ್ರಾ.ಪಂ. ವ್ಯಾಪ್ತಿಯ ತಾರವಾಡ ಮತ್ತು ಕೊಡಗೈ ಗ್ರಾಮಗಳಲ್ಲಿ ಮಕ್ಕಳಸ್ನೇಹಿಯಾಗಿರುವಂತೆ ತಲಾ ₹8 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಅಂಗನವಾಡಿ ಕೇಂದ್ರಗಳನ್ನೂ ಉದ್ಘಾಟಿಸಿದರು. ವಿಶೇಷವಾಗಿ ಕೊಡಗೈ ಗ್ರಾಮದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಅದೇ ಅಂಗನವಾಡಿ ಮಕ್ಕಳ ಜೊತೆಗೇ ಉದ್ಘಾಟನೆ ಮಾಡಿ ಮಕ್ಕಳ ಮೇಲಿ ತಮ್ಮ ಪ್ರೀತಿಯನ್ನು ಮೆರೆದರು.ನಂತರ ಕೊಡಗೈ ಗ್ರಾಮದ ನಿರಂಕಾರಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ರವರನ್ನು ವಿಶೇಷವಾಗಿ ಸತ್ಕರಿಸಿದರು. ಇದೇ ಸಂದರ್ಭದಲ್ಲಿ ಮಹಾತ್ಮಾ ಗಾಂಧೀ ಮನರೇಗಾ ಯೋಜನೆಯಡಿ ಅರ್ಹ ಫಲಾನುಭವಿಗಳಗೆ ದನದ ಕೊಟ್ಟಿಗೆ, ಕೃಷಿ ಭೂಮಿ ಸಮತಟ್ಟು, ಕೃಷಿ ಭಾವಿ ನಿರ್ಮಾಣ ಮುಂತಾದ ವ್ಯಕ್ತಿಗತ ಕಾಮಗಾರಿಗಳಿಗೆ ಕಾಮಗಾರಿ ಆದೇಶ ವಿತರಿಸಿದರು. ಇದಲ್ಲದೆ ಪರಿಶಿಷ್ಠ ಜಾತಿ/ಪಂಗಡಗಳ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಇದೇ ಸಮುದಾಯದ ಪ್ರತಿ ಕುಟುಂಬಕ್ಕೆ ಎರಡು ಪ್ರೆಶರ್ ಕುಕ್ಕರ್ ಹಾಗೂ ಎರಡು ಫ್ರೈಪಾನ್ ಗಳನ್ನು ಗ್ರಾ.ಪಂ.ನಿಧಿಯ ವತಿಯಿಂದ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ರವರು ಒಂದು ಗ್ರಾಮ ಪಂಚಾಯತಿಯಲ್ಲಿ ಒಂದೇ ವರ್ಷದಲ್ಲಿ ಇಷ್ಟು ಬಗೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವ ಮತ್ತು ಈಗಾಗಲೇ ಎರಡು ಅಂಗನವಾಡಿಗಳನ್ನು ಸುಸಜ್ಜಿತವಾಗಿ ನಿರ್ಮಿಸಿ ಮಕ್ಕಳಿಗೆ ಆಸಕ್ತಿ ತರಿಸುವ ಚಿತ್ರಗಳಿಂದ ಕಟ್ಟಡವನ್ನು ಸಿಂಗರಿಸಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿ ಯವರನ್ನು ಮತ್ತು ಅವರಿಗೆ ಸಹಕರಿಸಿದ ಗ್ರಾ.ಪಂ. ಕಮಿಟಿಯವರನ್ನು ಅಭಿನಂದಿಸಿದರು. ಸಮಾರಂಭದಲ್ಲಿ ಹಲಸಿ ಗ್ರಾಮಪಂಚಾಯಿತಿ ಅಧ್ಯಕ್ಷ ಆರ್.ಡಿ.ಹಂಜಿ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿ ಮತ್ತು ಗ್ರಾ.ಪಂ. ವ್ಯಾಪ್ತಿಯ ಎಲ್ಲ ಗ್ರಾಮಗಳ ಸಾರ್ವಜನಿಕರು ಹಾಜರಿದ್ದರು.