SHARE

ಬೆಳಗಾವಿ: ರಾಜ್ಯ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರಕಾರ ಅಭದ್ರಗೊಳಿಸುವ ಬಿಜೆಪಿ ಕುದುರೆ ವ್ಯಾಪಾರದ ಮೂಲಕ ದುಷ್ಟ ರಾಜಕೀಯ ಮಾಡುತ್ತಿದೆ ಎಂದು ನಗರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಚನ್ನಮ್ಮಾ ವೃತ್ತದಲ್ಲಿ ಸಂಯುಕ್ತ ಪ್ರತಿಭಟನೆ ನಡೆಸಿದರು. ಸಮ್ಮಿಶ್ರ ಸರಕಾರ ಸುಭದ್ರವಾಗಿದ್ದರೂ ರಾಜ್ಯ ಬಿಜೆಪಿ ನಾಯಕರು, ವಿರೋಧ ಪಕ್ಷದ ಕಾರ್ಯ ಮಾಡದೇ ಸರಕಾರ ಬೀಳಿಸುವ ಯತ್ನ ನಡೆಸಿದ್ದಾರೆ. ಶಂಕರ ಮಾಡಲಗಿ, ವಿನಯ ನಾವಲಗಟ್ಟಿ, ಪ್ರಭುಗೌಡ ಪಾಟೀಲ, ಮೇಘಾ ಕುಂದರಗಿ ಉಪಸ್ಥಿತರಿದ್ದರು.