SHARE

ಬೆಳಗಾವಿ: ಪ್ರತಿವರ್ಷದಂತೆ ಈ ವರ್ಷವೂ ನಗರದ ನಾನಾವಡಿ ಮೈದಾನದಲ್ಲಿ 9ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸಂಭ್ರಮದ ಚಾಲನೆ ಪಡೆಯಿತು. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಆಕರ್ಷಕ ಗಾಳಿಪಟೋತ್ಸವ ಸಂಘಟಿಸಲಾಗಿದ್ದು, ಆದಿತ್ಯ ಮಿಲ್ಕ ಪ್ರಾಯೋಜಕತ್ವ ನೀಡಿದೆ. ಇಂದು ಗಾಳಿಪಟ ಉತ್ಸವಕ್ಕೆ ದೆಹಲಿ ಮೇಯರ್ ಆದೇಶ ಗುಪ್ತಾ ಹಾಗೂ ಸಂಸದ ಸುರೇಶ ಅಂಗಡಿ ಚಾಲನೆ ನೀಡಿದರು.International Kite festival in Belagaviಬೃಹತ್ ಆಕಾರದ ವಿವಿಧ ಕೌಶಲ್ಯಗಳ ಗಾಳಿಪಟಗಳು ಮೊದಲ ದಿನವೇ ವೀಕ್ಷಕರ ಮನ ಗೆದ್ದವು. ಕ್ರೀಡೆ, ಜಿಮ್ನಾಸ್ಟಿಕ್, ಕಾರ್ಟೂನ್, ಗೋಲಾಕೃತಿ, ಪಿರಾಮಿಡ್ ಸೇರಿದಂತೆ ಹತ್ತಾರು ಬಗೆಯ ಪತಂಗ ಗಳು ಆಕಾಶದೆತ್ತರಕ್ಕೆ ಹಾರಾಡಿದವು. ಪತಂಗೋತ್ಸವ ನಾಲ್ಕು ದಿನ ನಡೆಯಲಿದ್ದು, ಲಕ್ಷಾಂತರ ಜನ ಸೇರಿಬರಲಿದ್ದಾರೆ.