SHARE

ಬೆಳಗಾವಿ: ಡಾ. ಶಿವಕುಮಾರ ಸ್ವಾಮೀಜಿ ಅವರ ಶಿವೈಕ್ಯದ ಹಿನ್ನೆಲೆಯಲ್ಲಿ ಮಂಗಳವಾರ ಸಂಪೂರ್ಣ ಸರಕಾರಿ ರಜೆ ಹಾಗೂ ಮೂರು ದಿನಗಳ ಶೋಕಾಚರಣೆ ಸರಕಾರ ಘೋಷಿಸಿದೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಘೋಷಣೆ ಮಾಡಿದರು. ಶ್ರೀಗಳ ಕೊನೆಯುಸಿರಿನ ಸುದ್ದಿ ತಿಳಿಸುವ ಸಂದರ್ಭ ಸರಕಾರದ ನಿರ್ಧಾರ ಪ್ರಕಟಿಸಿದರು. ಮಾಜಿ ಸಿಎಂ ಬಿ. ಎಸ್. ಯಡಿಯೂರಪ, ಡಿಸಿಎಂ ಡಾ. ಜಿ. ಪರಮೇಶ್ವರ ಅಮಿತ ಶೋಕ ವ್ಯಕ್ತಪಡಿಸಿದರು. ಮಂಗಳವಾರ ಸಂಜೆ ಸಕಲ ಸರಕಾರಿ ಗೌರವದೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದ್ದು, ಪ್ರಧಾನಿ ಸೇರಿ ಗಣ್ಯಾತಿಗಣ್ಯರಿಗೆ ಸರಕಾರ ಸ್ವಾಮೀಜಿ ಲಿಂಗೈಕ್ಯದ ಸುದ್ದಿ ರವಾಣಿಸಿದೆ. ರಾಷ್ಟ್ರವ್ಯಾಪಿ ನಾಯಕರು ತುಮಕೂರಿನತ್ತ ಆಗಮಿಸುವ ನಿರೀಕ್ಷೆ ಇದೆ.