SHARE

ಬೆಳಗಾವಿ: ಖೆಲೊ ಇಂಡಿಯಾ ಕೇಂದ್ರದ ಪರಿಕಲ್ಪನೆ ಅಡಿ ಬೆಳಗಾವಿ ಜಿಲ್ಲೆಯ ಸಿಆರ್ಪಿಎಫ್ ಕೋಬ್ರಾ ತರಬೇತಿ ಕೇಂದ್ರದಲ್ಲಿ ಇಂದಿನಿಂದ ಮೂರುದಿನ ಅಂತರಶಾಲಾ ವ್ಹಾಲಿಬಾಲ್ ಕ್ರೀಡಾಕೂಟ ಇಂದು ಚಾಲನೆ ಪಡೆಯಿತು.ಜಂಗಲ್ ವಾರ್ ಫೇರ್ ಮತ್ತು ಟ್ಯಾಕ್ಟಿಕ್ಸ್ ಜಿಲ್ಲೆಯ ತೋರಾಳಿ ಅರಣ್ಯದಲ್ಲಿ ಅರೆಸೈನಿಕ ತರಬೇತಿ ನೀಡುವ ಕೇಂದ್ರವಾಗಿದ್ದು, ದೇಶದ ನಕ್ಸಲಿಸಂ ಮತ್ತು ಟೆರರಿಸಂ ಎದುರಿಸಲು ತರಬೇತಿ ನೀಡುತ್ತದೆ. ಖೆಲೊ ಇಂಡಿಯಾ ಪರಿಕಲ್ಪನೆಯಡಿ ನಾಗರಿಕರು, ವಿದ್ಯಾರ್ಥಿಗಳನ್ನು ಪರಸ್ಪರ ಬೆಸೆದು ಭಾತೃತ್ವ ಹೆಚ್ಚಿಸಲು ಸಿಆರ್ ಪಿಎಫ್ ಇಂತಹ ಕ್ರೀಡಾಸ್ಪರ್ಧೆ ಆಯೋಜಿಸುತ್ತದೆ ಎಂದು ಎಂದು ಸೆಂಟರ್ ಕಮಾಂಡಂಟ್ ತಿಳಿಸಿದರು. ಇಂದು ಕಾರ್ಯಕ್ರಮವನ್ನು ನಿವೃತ್ತ ಡಿಐಜಿ ಬ್ರಿ. ಸಂಜಯ ಥಾಪಾ ಉದ್ಘಾಟಿಸಿದರು. ಜನೇವರಿ 26ಕ್ಕೆ ಸಮಾರೋಪ ನಡೆಯಲಿದ್ದು ಸಿಆರ್ ಪಿಎಫ್ IGP ಟಿ. ಶೇಖರ್ ಭಾಗವಹಿಸಲಿದ್ದಾರೆ. ಒಟ್ಟು 23ಮ್ಯಾಚ್ ನಡೆಯಲುದ್ದು 7 ಹುಡುಗರ ಹಾಗೂ 13 ಹುಡುಗಿಯರ ತಂಡಗಳಿಂದ ಕ್ರೀಡಾಕೂಟ ನಡೆಯಲಿದೆ.