SHARE

ಬೆಳಗಾವಿ:’ಉಡಾನ್ 3′ ಖ್ಯಾತಿಯ ಬೆಳಗಾವಿ ಇನ್ಮುಂದೆ ದೇಶದ ಮೆಟ್ರೊ ಸಹಿತ 13ಪ್ರಮುಖ ವಾಣಿಜ್ಯ, ಸಾಂಸ್ಕ್ರತಿಕ ಹಾಗೂ ಧಾರ್ಮಿಕ ನಗರಗಳಿಗೆ ಬೆಳಗಾವಿಯನ್ನು ಬೆಸೆಯಲಿದೆ. ಮುಂಬಯಿ, ಪುನೆ, ಹೈದರಾಬಾದ್, ಇಂದೋರ್, ಜೋಧಪುರ, ನಾಸಿಕ್, ನಾಗಪುರ, ಮೈಸೂರು, ಕಡಪಾ, ತಿರುಪತಿ, ಜೈಪುರ, ಸೂರತ್ ತಿರುಪತಿ ನಗರಗಳಿಗೆ ವಿವಿಧ ವಿಮಾನಯಾನ ಸಂಸ್ಥೆಗಳ ಮೂಲಕ ಹಾರಾಟ ಮಾಡಬಹುದಾಗಿದೆ. ಸದ್ಯಕ್ಕೆ ಸ್ಪೈಸ್ ಜೆಟ್ ಜತೆಗೆ ಸಂಜಯ ಗೋಡಾವತ್ ಏರಲೈನ್ಸ್ ಸಹ ಇತ್ತೀಚೆಗೆ ಕೈ ಜೋಡಿಸಿದ್ದನ್ನು ಗಮನಿಸಬಹುದು. ಏರ್ ಅಲೈನ್ಸ್, ಇಂಟರ್ ಗ್ಲೋಬ್, ಟರ್ಬೋ ನಾಗರಿಕ ವಿಮಾನಯಾನ ಸಂಸ್ಥೆಗಳು ಮುಂದೆ ಬಂದಿವೆ.