SHARE

ಬೆಳಗಾವಿ: ಬೆಳಗಾವಿಯಲ್ಲಿ 70ನೇ ಗಣರಾಜ್ಯೋತ್ಸವವನ್ನು ಸಚಿವ ಸತೀಶ ಜಾರಕಿಹೊಳಿ ಇಂದು ನೆರವೇರಿಸಿದರು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9ಕ್ಕೆ ಧ್ವಜಾರೋಹಣ ನೆರವೇರಿಸಿ ಕವಾಯತು ಪರಿವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು. ಲಕ್ಷಾಂತರ ಮಹಿನಿಯರಿಂದ ಪಡೆದ ಸ್ವಾತಂತ್ರವನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಗಣರಾಜ್ಯ ದೇಶದ ನಾಗರಿಕರ ಕರ್ತವ್ಯವಾಗಿದ್ದು, ರಾಷ್ಟ್ರೀಯ ಐಕ್ಯತೆ, ಸಹೋದರತ್ವದಲ್ಲಿ ಗಣರಾಜ್ಯದ ಆಶಯ ಈಡೇರುತ್ತದೆ ಎಂದರು.

ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ, ಪ್ರಾದೇಶಿಕ ಆಯುಕ್ತ ಪಿ. ಎ. ಮೇಘ‌್ನವರ, ಐಜಿಪಿ ಎಚ್. ಎಸ್. ರೇವಣ್ಣ, ಡಿಐಜಿ ಡಾ. ಡಿ. ಸಿ. ರಾಜಪ್ಪ, ಎಸ್ಪಿ ಸುಧೀರಕುಮಾರ ರೆಡ್ಡಿ, ಸಿಇಓ ರಾಜೇಂದ್ರ ಕೆ. ವಿ. ಹಾಗೂ ಸಂಸದ ಶಾಸಕರು, ಸಾರ್ವಜನಿಕರು ಭಾಗವಹಿಸಿದರು.