SHARE

ಬೆಳಗಾವಿ: ಕಂದಾಯ ಇಲಾಖೆಯ ‘No Crop’ ಎಂಟ್ರಿ ರಾದ್ಧಾಂತ ಇಂದು ಸಚಿವ ಸಂಪುಟ ಉಪಸಮಿತಿ ಪರಿಶೀಲನಾ ಸಭೆಯಲ್ಲಿ ಹೊರಬಿದ್ದಿದೆ. ರೈತರ ಹೊಲದ ಉತಾರಗಳಲ್ಲಿ ಕಂದಾಯ ಇಲಾಖೆ ಸಾಗುವಳಿ ರಹಿತ(No Crop) ಎಂದು ನಮೂದು ಮಾಡಿದ್ದು, ಇದರಿಂದ ರೈತರಿಗೆ ಬೆಳೆಹಾನಿ ಇನ್ಶೂರೆನ್ಸ ಪಡೆಯಲು ತೊಂದರೆಯಾಗುತ್ತಿದೆ ಎಂದು ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಸಭೆಗೆ ತಿಳಿಸಿದರು.

ಶಾಸಕ ಅಭಯ ಪಾಟೀಲ ಸಹ ದನಿಗೂಢಿಸಿ ಮಾತನಾಡಿ ಸ್ವತಃ ನನ್ನ ಹೊಲದ ಉತಾರದಲ್ಲೇ ಕಂದಾಯ ಅಧಿಕಾರಿಗಳು ‘ನೊ-ಕ್ರಾಪ್ ಎಂದು ನಮೂದಿಸಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಕೂಡಲೇ ಎಸಿ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಮತ್ತು ಅಧಿಕಾರಿಗಳ ಸಭೆ ನಡೆಸಿ ತಪ್ಪು ಸರಿಪಡಿಸಲು ಸಚಿವ ಸತೀಶ ಜಾರಕಿಹೊಳಿ ಸಭೆಯಲ್ಲಿ ಸೂಚಿಸಿದರು.