SHARE

ಬೆಳಗಾವಿ: ಲೋಕಸಭೆಗೆ ಸ್ಪರ್ಧಾಳುಗಳ ಆಯ್ಕೆಗೆ ಇಂದು ಕಾಂಗ್ರೆಸ್ ಬೆಳಗಾವಿಯಲ್ಲಿ ಕಸರತ್ತು ನಡೆಸಿ ಅಭಿಪ್ರಾಯ ಸಂಗ್ರಹ ನಡೆಸಿತು. ನಗರದ ಖಾಸಗಿ ಹೊಟೇಲನಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ- ಚಿಕ್ಕೋಡಿ ವಿಧಾನಸಭೆ ಕ್ಷೇತ್ರಗಳಿಗೆ ಸಂಸದ ಚುನಾವಣೆಗೆ ಆಕಾಂಕ್ಷಿಗಳ ಸ್ಕ್ರೀನಿಂಗ್ ಇಂದು ನಡೆಯಿತು. ಎಐಸಿಸಿ ಪ್ರಾದೇಶಿಕ ಉಸ್ತುವಾರಿ ಮಾಣಿಕಂ ಟ್ಯಾಗೋರ್ ಮತ್ತು ಎಐಸಿಸಿ ಕಾರ್ಯದರ್ಶಿ ವಿಶ್ವನಾಥ ಅವರು ಜಿಲ್ಲೆಯ ಪ್ರಮುಖ ನಾಯಕರು ಹಾಗೂ ಪದಾಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹ ನಡೆಯಿತು.ವಿ. ಎಸ್. ಸಾಧುನವರ, ವಿನಯ ನಾವಲಗಟ್ಟಿ, ಶಿವಕಾಂತ ಸಿದ್ನಾಳ, ಅಶೋಕ ಪಟ್ಟಣ, ನಾಗರಾಜ ಯಾದವ, ಅರವಿಂದ ದಳವಾಯಿ, ಎ. ಬಿ. ಪಾಟೀಲ ಸೇರಿ ಹಲವರು ಟಿಕೇಟ್ ಆಕಾಂಕ್ಷೆ ವ್ಯಕ್ತಪಡಿಸಿದ್ದು, ಪ್ರತಿಯೊಬ್ಬರ ಸ್ಕ್ರೀನಿಂಗ್ ನಡೆಸಿ ಪಕ್ಷದ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ನಡೆಸಿದರು.
ಚಿಕ್ಕೋಡಿ- ಬೆಳಗಾವಿ ಹಾಗೂ ವಿಜಯಪುರ ಸಂಸದ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಕಸರತ್ತಿನಲ್ಲಿ ಯಾರ ಹಣೆಬರಹ ನಿಲುಕುವುದೋ ಅದನ್ನು ವರಿಷ್ಠರು ನಿರ್ಧರಿಸಲಿದ್ದಾರೆ. ಬಹುತೇಕ ನಾಯಕರು ಹಾಗೂ ಪದಾಧಿಕಾರಿಗಳು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಂಸದ ಎಸ್. ಬಿ. ಸಿದ್ನಾಳ ಪುತ್ರ ಶಿವಕಾಂತ ಸಿದ್ನಾಳ ಅವರ ಹೆಸರು ಸೂಚಿಸಿರುವುದು ಗಮನಸೆಳೆದಿದೆ.

ಚಿಕ್ಕೋಡಿ ಕ್ಷೇತ್ರದಿಂದ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಹೆಸರು ಫೈನಲ್ ಆಗುವ ಸೂಚನೆ ಕಂಡುಬಂದಿದೆ. ಇಂದು ಮಾಜಿ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳನ್ನು ಹೊರತುಪಡಿಸಿ ಬಹುತೇಕ ಶಾಸಕರು ಸಭೆ ಸ್ಥಳದತ್ತ ಆಗಮಿಸಲಿಲ್ಲ.