SHARE

ನವದೆಹಲಿ: ಮೋದಿ ಸರ್ಕಾರದ ಕೊನೆ ಬಜೆಟ್​ನಲ್ಲಿ ರೈತರಿಗೆ ಹೊಸ ಯೋಜನೆ ಘೋಷಿಸಿರುವ ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ರೈತರ ಖಾತೆಗಳಿಗೆ ವಾರ್ಷಿಕ ₹6 ಸಾವಿರ ರೂಪಾಯಿ ಜಮಾ ಮಾಡಲಿದೆ. 2018-19ರ ಬಜೆಟ್​ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಿಸಿದ ಕೇಂದ್ರ ಹಣಕಾಸು ಸಚಿವ ಪಿಯೂಷ್​ ಗೊಯಲ್ ಈ ಯೋಜನೆ ಮೂಲಕ 5ಎಕರೆ ಒಳಗಡೆ ಭೂಮಿ ಇರೋ ರೈತರ ಖಾತೆಗೆ ಸುಮಾರು ₹6 ಸಾವಿರ ರೂಪಾಯಿ ಹಾಕಲಾಗುವುದು ಅಂತಾ ಬಜೆಟ್​ನಲ್ಲಿ ಘೋಷಿಸಿದ್ದಾರೆ.

2018 ಡಿಸೆಂಬರ್‌ನಿಂದ ಪೂರ್ವಾನ್ವಯವಾಗುವಂತೆ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಡಿಸೆಂಬರ್​ನ ₹2000 ಮೊತ್ತವನ್ನ ಈಗಿನಿಂದಲೇ ರೈತರ ಖಾತೆಗೆ ತಲುಪಿಸಲು ಕ್ರಮಕೈಗೊಳ್ಳಲಾಗುವುದು. ಈ ಯೋಜನೆಯ ಸಂಪೂರ್ಣ ವೆಚ್ಚವನ್ನ ಕೇಂದ್ರವೇ ಭರಿಸಲಿದ್ದು. ಬಜೆಟ್​ನಲ್ಲಿ ಇದಕ್ಕಾಗಿ ₹75 ಸಾವಿರ ಕೋಟಿ ಮೀಸಲಿಡಲಾಗಿದೆ. ಒಟ್ಟು ಮೂರು ಕಂತುಗಳಲ್ಲಿ ರೈತರಿಗೆ ಹಣ ನೀಡಲಾಗುವುದು, ಇದು 12 ಕೋಟಿ ರೈತರಿಗೆ ಸಹಾಯವಾಗಲಿದೆ.