SHARE

ಬೆಂಗಳೂರು: ನಗರದ ಗೃಹ ಕಚೇರಿ ಕೃಷ್ಣಾದಲ್ಲಿ ಬಜೆಟ್​ ಕುರಿತು ಮಾತನಾಡಿದ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಈ ಬಜೆಟ್​ನಲ್ಲಿ ಪ್ರಧಾನಿ ಮೋದಿಯವರು ರೈತರಿಗೆ ಬಾಂಬೆ ಮಿಟಾಯಿ ತಿನ್ನಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಕೇಂದ್ರದ ಮಧ್ಯಂತರ ಬಜೆಟ್​ನ ಆರ್ಥಿಕ ಇಲಾಖೆ ಅಧಿಕಾರಿಗಳು ತಯಾರಿಸಿದ್ದೋ ಇಲ್ಲವೇ, ಆರ್​ಎಸ್ಎಸ್​ ​ನವ್ರು ಸಿದ್ಧಪಡಿಸಿದ್ದಾರೋ ಗೊತ್ತಿಲ್ಲ ಇದು ಚುನಾವಣೆ ಪೂರ್ವದಲ್ಲಿ ಕೊನೆಯ ಬಜೆಟ್ ಮಂಡಿಸಲಾಗಿದೆ. ನಾನು ರೈತರ ಸಾಲಮನ್ನಾ ಘೋಷಣೆ ಮಾಡಿದಾಗ ಪ್ರಧಾನಿಯವರು ಅದನ್ನು ಲಾಲಿಪಾಪ್​ ಅಂತಾ ಹೇಳಿದ್ದರು ಅಂತಾ ಆರೋಪಿಸಿದರು.

ನಮ್ಮ ಸರ್ಕಾರ ರೈತರಿಗಾಗಿ ₹48 ಸಾವಿರ ಕೋಟಿ ಸಾಲಮನ್ನಾ ಘೋಷಿಸಿದೆ. ಬಜೆಟ್​ನಲ್ಲಿ ರೈತರಿಗೆ ವರ್ಷಕ್ಕೆ ₹6 ಸಾವಿರ ಕೊಡುವ ಯೋಜನೆ ರೂಪಿಸಲಾಗಿದೆ. ಅಂದ್ರೆ 12 ಕೋಟಿ ರೈತರಿಗೆ ₹75 ಸಾವಿರ ಕೋಟಿ ಹಣ ತೆಗೆದಿಟ್ಟಿದ್ದೇವೆ ಎಂದು ಬಜೆಟ್ ನಲ್ಲಿ ಹೇಳಿದ್ದಾರೆ. ಹಾಗಾದ್ರೆ ಬಜೆಟ್ ಅನುಷ್ಠಾನಕ್ಕೆ ಬಂದರೆ ರಾಜ್ಯದ 59 ಲಕ್ಷ ರೈತರಿಗೆ ₹3579 ಕೋಟಿ ಸಿಗಲಿದೆ. ಆದ್ರೆ ನಾನು ಸಾಲಮನ್ನಾ ಯೋಜನೆ ಘೋಷಿಸಿದಾಗ ಬಿಜೆಪಿಯವರು, ಲಾಲಿಪಾಪ್ ಕೊಡ್ತಾ ಇದ್ದಾರೆ ಎಂದು ಆರೋಪಿಸಿದ್ರು. ಹಾಗಾದ್ರೆ ಕೇಂದ್ರದ ಈ ಯೋಜನೆಯನ್ನು ನಾವು ಕಾಟನ್ ಕ್ಯಾಂಡಿ ಎಂದು ಕರೆಯಬೇಕಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.